Udupi : ಇಂಡಿಯನ್ ಡೆಂಟಲ್ ಅಸೋಸಿಯೇಶನ್ (ಐಡಿಎ) ಉಡುಪಿ ಶಾಖೆ, 51ನೇ ಐಡಿಎ ಕರ್ನಾಟಕ ರಾಜ್ಯ ದಂತ ಸಮ್ಮೇಳನ 2025ರಲ್ಲಿ ಆರು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದೆ. ಈ ಸಮ್ಮೇಳನವು ಅಜ್ಜಿ ಓಷನ್, ಕಾರವಾರದಲ್ಲಿ ನಡೆಯಿತು.
ಉಡುಪಿ ಶಾಖೆಗೆ ನೀಡಲಾದ ಪ್ರಶಸ್ತಿಗಳು: ಶ್ರೇಷ್ಠ ಶಾಖಾ ಅಧ್ಯಕ್ಷ ಪ್ರಶಸ್ತಿ – 100 ಕ್ಕಿಂತ ಹೆಚ್ಚು ಸದಸ್ಯ ರಿರುವ ಶಾಖೆ, ಶ್ರೇಷ್ಠ ಶಾಖಾ ಕಾರ್ಯದರ್ಶಿ ಪ್ರಶಸ್ತಿ – 100 ಕ್ಕಿಂತ ಹೆಚ್ಚು ಸದಸ್ಯರಿರುವ ಶಾಖೆ, ಶ್ರೇಷ್ಠ ಸದಸ್ಯತ್ವ ವೃದ್ಧಿ ಪ್ರಶಸ್ತಿ – ಡಾ. ಯು. ಎಸ್. ಮೋಹಂದಾಸ್ ನಾಯಕ್ ಪ್ರಶಸ್ತಿ, ಶ್ರೇಷ್ಠ ಶಾಖಾ ವಾರ್ತಾಪತ್ರಿಕೆ/ಬುಲೆಟಿನ್ – ಡಾ. ಬಿ. ಟಿ. ಹೆಗ್ಡೆ ಪ್ರಶಸ್ತಿ, ಶ್ರೇಷ್ಠ ಸಿಡಿಇ ಚಟುವಟಿಕೆ -ಡಾ. ವಿ. ವಿ. ಸುಬ್ಬರೆಡ್ಡಿ ಪ್ರಶಸ್ತಿ, ಶ್ರೇಷ್ಠ ಆಲ್ ರೌಂಡ್ ಚಟುವಟಿಕೆ – ಡಾ. ಬಿ. ಟಿ. ಹೆಗ್ಡೆ ರೋಲಿಂಗ್ ಟ್ರೋಫಿ (100 ಕ್ಕಿಂತ ಹೆಚ್ಚು ಸದಸ್ಯರಿರುವ ಶಾಖೆ),
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಖಾತೆಯ ಮಾನ್ಯ ಸಚಿವ ಡಾ. ಎಂ. ಸಿ. ಸುಧಾಕರ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭಾರತ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಐಡಿಎ ಕರ್ನಾಟಕ ರಾಜ್ಯ ಕಾರ್ಯಕಾರಿ ಸದಸ್ಯ ಡಾ. ಶಿವಶರಣ ಶೆಟ್ಟಿ (ಅಧ್ಯಕ್ಷರು), ಡಾ. ಮಹೇಶ್ ಚಂದ್ರ ಕೆ (ಮಾನ್ಯ ಕಾರ್ಯದರ್ಶಿ) ಮತ್ತು ಡಾ. ಸಂಜಯ್ ಕುಮಾರ್ ಡಿ (ಖಜಾಂಚಿ) ಹಾಗೂ ಆಯೋಜನಾ ಸಮಿತಿಯ ಸದಸ್ಯರು – ಡಾ. ಶುಭನ್ ಅಳ್ವ (ಸಮ್ಮೇಳನ ಕಾರ್ಯದರ್ಶಿ), ಡಾ. ಸೂರಜ್ ಹೆಗ್ಡೆ (ಆಯೋಜನಾ ಅಧ್ಯಕ್ಷ) ಮತ್ತು ಡಾ. ರಾಮಚಂದ್ರ ಮಲ್ಲನ್ (ಆಯೋಜನಾ ಕಾರ್ಯದರ್ಶಿ) ಅವರ ಉಪಸ್ಥಿತರಿದ್ದರು.



