Home Karavali Karnataka ಹಿಂದೂ ಧರ್ಮದ ಪವಿತ್ರ ಕ್ಷೇತ್ರವಾದ ಧರ್ಮಸ್ಥಳಕ್ಕೆ ಧಕ್ಕೆಯಾಗದ ರೀತಿಯಲ್ಲಿ ತನಿಖೆ ಮಾಡಿ : ಕ.ರ.ವೇ ಜಿಲ್ಲಾಧ್ಯಕ್ಷ...

ಹಿಂದೂ ಧರ್ಮದ ಪವಿತ್ರ ಕ್ಷೇತ್ರವಾದ ಧರ್ಮಸ್ಥಳಕ್ಕೆ ಧಕ್ಕೆಯಾಗದ ರೀತಿಯಲ್ಲಿ ತನಿಖೆ ಮಾಡಿ : ಕ.ರ.ವೇ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಒತ್ತಾಯ…!!

ಉಡುಪಿ : ಧರ್ಮಸ್ಥಳದಲ್ಲಿ ಸುಮಾರು ದಿನಗಳಿಂದ “ಹಲವಾರು ಶವಗಳನ್ನು ಹೂತಿದ್ದು” ಎಂಬ ಊಹಾಪೋಹಗಳಿಂದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿ ರುವ ದೂರು ಪ್ರಕರಣಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕಗಳು, ಊಹಾ ಪೋಹಗಳು ಹಾಗೂ ಗೊಂದಲಗಳು ಹುಟ್ಟಿಸಿ ಧರ್ಮದ ಶ್ರೀ ಕ್ಷೇತ್ರವಾದ ಧರ್ಮಸ್ಥಳದ ಪವಿತ್ರ ದೇವಿಸ್ಥಾನಕ್ಕೆ ಕೆಟ್ಟ ಹೆಸರು ತರಲು ನಾನಾ ರೀತಿಯಲ್ಲಿ ಸರ್ಕಸ್ ನಡೆಯುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರವು ಸ್ವಯಂ ಪ್ರೇರಣೆಯಿಂದ ಅತ್ಯಂತ ಪ್ರಾಮಾಣಿಕವಾಗಿ ಸೂಕ್ತ ಅಧಿಕಾರಿಗಳ ತಂಡ ವನ್ನು ರಚಿಸಿ ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ಸತ್ಯ. ಅಮಾಯಕ ಮಹಿಳೆ ಸೌಜನ್ಯ ಕೇಸ್ ಇರಬಹುದು ಅಥವಾ ಇನ್ನಿತರೆ ಯಾವುದೇ ಕೇಸ್ ಇರಬಹುದು ಅವುಗಳನ್ನು ಸರ್ಕಾರವು ಸೂಕ್ತ ತನಿಖಾ ತಂಡದೊಂದಿಗೆ ಶೀಘ್ರವಾಗಿ ಪ್ರಾಮಾಣಿಕ ವಾಗಿ ತನಿಖೆ ನಡೆಸಲಿ, ಆದರೆ ರಾಷ್ಟ್ರೀಯ ಮಟ್ಟದಲ್ಲಿ ಹಿಂದು ಧರ್ಮದ ಪವಿತ್ರ ಶ್ರೀ ಕ್ಷೇತ್ರವಾದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಧರ್ಮಸ್ಥಳವನ್ನು ಗುರಿಯಾಗಿಸಿ ಕೊಂಡು ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ಮತ್ತು ರಾಜಕೀಯ ಪಿತೂರಿ ನಡೆಸುವುದು ಎಷ್ಟರ ಮೆಟ್ಟಿಗೆ ಸರಿ..

ಶ್ರೀ ಕ್ಷೇತ್ರ ಧರ್ಮಸ್ಥಳವು ಉಗಮ ವಾಗಿ ಸುಮಾರು 500 ವರ್ಷಗಳ ಗತವೈ ಭವ ಹೊಂದಿರುವಂತಹ ಪುಣ್ಯ ಕ್ಷೇತ್ರವಾಗಿ ಇಲ್ಲಿಯವರೆಗೆ ಲಕ್ಷಾಂತರ ಸಾಮೂಹಿಕ ವಿವಾಹಗಳನ್ನು ಮಾಡುವುದರ ಮುಖಾಂತರ ಬಡವರಿಗೆ, ದೀನ ದಲಿತರಿಗೆ, ಪ್ರತಿ ನಿತ್ಯ ಲಕ್ಷಾಂತರ ಸಾರ್ವಜನಿಕರ ಅನ್ನದಾಸೋಹ ನಡೆ ಸುತ್ತಿರುವ ಪವಿತ್ರ ಕ್ಷೇತ್ರಕ್ಕೆ ಆಗಿಲ್ಲದ ಈಂತಹ ಘಟನೆಗಳು ಒಂದು ವರ್ಷ ಅಥವಾ ಎರಡು ವರ್ಷದೊಳಗೆ ಇಂತಹ ಕೆಟ್ಟ ಘಟನೆಗಳು ಹೇಗೆ ಉದ್ಭವಿಸುತ್ತಿವೆ? ಇದರ ಬಗ್ಗೆ ಪ್ರಾಮಾಣಿಕ ಸೂಕ್ತ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ಭಹಿರಂಗಪಡಿಸುವಂತೆ ಮತ್ತು ಶ್ರೀಕ್ಷೇತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ತಪ್ಪಿತಸ್ಥರು ಎಂತಹ ದೊಡ್ಡ ವ್ಯಕ್ತಿಯಾಗಿದ್ದರೂ ಸಹ ಅಂತಹ ವ್ಯಕ್ತಿಗಳನ್ನು ಕಂಡು ಹಿಡಿದು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕೆಂದು ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಸರ್ಕಾರಕ್ಕೆ ಪತ್ರಿಕೆ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.