Home Crime ಕೇರಳ: ರೈಲಿಗೆ ಹಾರಿ ಜೀವ ಬಿಟ್ಟ ವ್ಯಕ್ತಿ : ಭಯಾನಕ ವಿಡಿಯೋ…!!

ಕೇರಳ: ರೈಲಿಗೆ ಹಾರಿ ಜೀವ ಬಿಟ್ಟ ವ್ಯಕ್ತಿ : ಭಯಾನಕ ವಿಡಿಯೋ…!!

ಕೇರಳ: ವ್ಯಕ್ತಿಯೊಬ್ಬರು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕರುವಟ್ಟು ರೈಲ್ವೆ ಕ್ರಾಸಿಂಗ್ ನಲ್ಲಿ ನಡೆದಿದೆ. ಜೂನ್ 14ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೀರಿಕೊಡೆಯ ಮುರಳಿ (71) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ರೈಲು ಬರುತ್ತಿದ್ದಂತೆ ಹಳಿಯಲ್ಲಿ ಬಂದು ನಿಂತಿದ್ದರು. ನಂತರ ರೈಲು ಡಿಕ್ಕಿ ಹೊಡೆದಿದೆ. ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.