ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೇಲಿಂದ ಮೂರು ಜನ ಅಪ್ರಾಪ್ತ ವಿದ್ಯಾರ್ಥಿನಿಯವರು ಕಾಣೆಯಾಗಿದ್ದು, ಈ ಬಗ್ಗೆ ಹಾಸ್ಟೇಲ್ ವಾರ್ಡನ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಬ್ ಇನ್ಸ್ಪೆಕ್ಟರ್ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿಯವರಾದ ಸಿದ್ದು ಸಕನಳ್ಳಿ ಮತ್ತು ಕಿರಣ್ ಇವರು ಕ್ಷಿಪ್ರ ಕಾರ್ಯಪ್ರವೃತ್ತರಾಗಿ ಮಾಹಿತಿ ಕಲೆ ಹಾಕಿ, ಮೂರು ಜನ ವಿದ್ಯಾರ್ಥಿನಿಯರನ್ನು ಬಂಟ್ವಾಳ ಬಿಸಿ ರೋಡ್ ಬಳಿ ಪತ್ತೆ ಮಾಡಿದ್ದಾರೆ.



