Home Crime ಲಾರಿ ಕ್ಯಾಬಿನ್ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!!

ಲಾರಿ ಕ್ಯಾಬಿನ್ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..!!

ಗಂಗೊಳ್ಳಿ: ಲಾರಿ ಕ್ಯಾಬಿನ್’ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಚಾಲಕ ಮೃತದೇಹ ಪತ್ತೆಯಾಗಿದೆ.

ಮೃತ ಚಾಲಕ ಮನ್ಸೂರ್‌ ಅಲಿ (50) ದಾವಣಗೆರೆ ಮೂಲದವರು ಎನ್ನಲಾಗಿದೆ.

ನ.6 ರಂದು ರಾತ್ರಿ 10:00 ಗಂಟೆಗೆ KA-17 D-3382 ನೇ ವೀರಭದ್ರೇಶ್ವರ ಲಾರಿಯಲ್ಲಿ ಚಾಲಕರಾಗಿ ಥವಡು ಲೋಡ್ ಮಾಡಿ ಮಂದಾರ್ಥಿಯ ಲಕ್ಷ್ಮೀ ಫೀಡ್ಸ್‌ ಕಾರ್ಖಾನೆಗೆ ತಲುಪಿಸಲು ದಾಣಗೆರೆಯಿಂದ ಹೊರಟು ದಿನಾಂಕ ನ. 7 ರಂದು ಲಾರಿಯ ಲೋಡ್‌ ಮಂದಾರ್ಥಿಗೆ ತಲುಪಿಲ್ಲ‌. ನಂತರ ತ್ರಾಸಿ ಗ್ರಾಮದ ಶ್ರೀ ಗಜಾನನ ಗ್ಯಾರೇಜ್‌ನ್‌ ಎದುರಿನ ರಾ ಹೆ 66 ರಲ್ಲಿ ಬದಿಯಲ್ಲಿ KA-17 D-3382 ನೇ ವೀರಭದ್ರೇಶ್ವರ ಲಾರಿ ಇದ್ದು ಸದ್ರಿ ಲಾರಿಯ ಕ್ಯಾಬಿನ್‌ ಒಳಗಡೆ ಚಾಲಕ ಮನ್ಸೂರ್‌ ಅಲಿ ರವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಮನ್ಸೂರ್ ಅಲಿರವರು ಅವರಿಗಿರುವ ಅನಾರೋಗ್ಯದಿಂದ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿರುವುದಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.