Home Crime ಪರ್ಕಳದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ…!!

ಪರ್ಕಳದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ…!!

ಮಣಿಪಾಲ: ಉಡುಪಿಯ ಪರ್ಕಳ ಕೆನರಾ ಬ್ಯಾಂಕಿನ ತಿರುವಿನಲ್ಲಿ ಲಾರಿಯೊಂದು ಪಲ್ಟಿಯಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಲಾರಿ ಸಮೀಪದ ಅತ್ರಾಡಿಯಿಂದ ಪೇಪರ್ ಬಾಕ್ಸಗಳನ್ನು ತುಂಬಿಕೊಂಡು ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿತ್ತು. ಬೆಳಿಗ್ಗಿನ ಜಾವ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ರಸ್ತೆತುಂಬ ಚೆಲ್ಲಿದ ರೆಡಿ ಮಿಕ್ಸ ,ಜಲ್ಲಿ ಮಿಶ್ರಣದಿಂದ ಈ ಅವಘಡ ಸಂಭವಿಸಿದೆ. ಮಣಿಪಾಲದಿಂದ ಹೊರಡುವ ರೆಡಿ ಮಿಕ್ಸರ್ ವಾಹನಗಳು ಎಲ್ಲೆಂದರಲ್ಲಿ ಜಲ್ಲಿ ಮಿಶ್ರಣವನ್ನು ಚೆಲ್ಲುತ್ತಾ ಸಾಗುವುದರಿಂದ ಈ ರಸ್ತೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಘಟನೆಯಿಂದಾಗಿ ವಾಹನದ ಡೀಸೆಲ್ ಸೋರಿಕೆಯಾಗಿದ್ದು ಸಂಪೂರ್ಣ ಜಖಂಗೊಂಡಿದೆ.

ಪರ್ಕಳದ ರಸ್ತೆ ಅವ್ಯವಸ್ಥೆ ಪರಿಣಾಮ ವಾಹನಗಳು ಕೆಟ್ಟು ನಿಲ್ಲುವುದು, ಅಪಘಾತಗಳು ನಡೆಯುತ್ತಿರುವುದು ಸರ್ವೇಸಾಮಾನ್ಯವಾಗಿದೆ.

ಜನಪ್ರತಿನಿಧಿಗಳು ಶೀಘ್ರ ಹಳೇ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರಾದ ಗಣೇಶ್ ರಾಜ್ ಮತ್ತಿತರರು ಆಗ್ರಹಿಸಿದ್ದಾರೆ,