ಉಡುಪಿ : ಇಡಿ ಕರ್ನಾಟಕದಲ್ಲಿ ಪ್ರತಿಭಾನಿತ್ವ ಭಾರತ್ ಸ್ಕೌಟ್ – ಗೈಡ್ಸ್ ವಿದ್ಯಾರ್ಥಿಗಳಿಗೆ ಇಂದು ತಾರೀಕು 26/6/26 ರಂದು ಜಿಲ್ಲಾ ಘಟಕದ ವತಿಯಿಂದ ಪರ್ಯಾಯ ಶ್ರೀ ಶೀರೂರು ಮಠ ಶ್ರೀ ಕೃಷ್ಣ ಮಠದ ಸಯೋಗದಲ್ಲಿ 2025- 2026 ನೇ ಸಾಲಿನ ರಾಜ್ಯಮಟ್ಟದ SSLC, PUC ಪ್ರತಿ ಭಾನಿತ್ವ ಸ್ಕೌಟ್ – ಗೈಡ್ಸ್ ವಿದ್ಯಾರ್ಥಿಗಳಿಗೆ ಸಮ್ಮಾನ ಸಮಾರಂಭವು ಬೆಳಿಗ್ಗೆ 10:30 ಕ್ಕೆ ಉಡುಪಿ ರಾಜಂಗನ ದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಮುಂಬಯಿಯ ಮದರ್ ಇಂಡಿಯಾ ಸ್ಕೌಟ್ ಮಿತ್ರರಾದ ಜಯ ಸಿ ಪೂಜಾರಿ ಕೆಳಾರ್ಕಳ ಬೆಟ್ಟು ಮತ್ತು ಸುದೇಶ್ ಭಂಡಾರಿ ಬಲಾಯಿ ಪಾದೆ ಇವರಿಬ್ಬರನ್ನು ಭಾರತ್ ಸ್ಕೌಟ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿ ಜಿ ಆರ್ ಸಿಂದ್ಯಾ ಮತ್ತು ಕರ್ನಾಟಕ ರಾಜ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ಅಲ್ಲದೆ ಬೆಂಗಳೂರು ಘಟಕದ ಪ್ರಭಾಕರ್ ಭಟ್ ಶಾಲು ಹಾಕಿ ಗೌರವಿಸಿದರು.





