ಬಿಲ್ಲವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಮುಂಡ್ಕೂರು-ಮುಲ್ಲಡ್ಕ-ಇನ್ನಾ ಇದರ ವತಿಯಿಂದ ದಿ. ಚಿಂದು ಪೂಜಾರಿ ಸ್ಮರಣಾರ್ಥ ಅವರ ಮಕ್ಕಳಿಂದ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಹಾಗೂ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ ಪೊಸ್ರಾಲು ಬಿಲ್ಲವ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಮುಂಬೈ ಉದ್ಯಮಿ ವಸಂತ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬಿಲ್ಲವ ಸಂಘದ ಗೌರವಾಧ್ಯಕ್ಷ ಶ್ರೀಧರ ಸನಿಲ್ ಅವರು, ಆಟಿ ತಿಂಗಳ ವೈಶಿಷ್ಟ್ಯತೆ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ, ಮಂದಿರದ ಅರ್ಚಕ ಕೇಶವ ಅಂಚನ್, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೃಷ್ಣ ಪೂಜಾರಿ ಬಂಟ್ರೋಟ್ಟು, ಉಷಾ ವಾಸು ಅಂಚನ್, ಮಲ್ಲಿಕಾ ಪೂಜಾರಿ ದಡ್ಡು, ಯುವ ವೇದಿಕೆಯ ಅಧ್ಯಕ್ಷ ಲತೀಶ್ ಪೂಜಾರಿ, ಗೌರವಾಧ್ಯಕ್ಷ ಹರೀಶ್ ಪೂಜಾರಿ, ಕಾರ್ಯದರ್ಶಿ ವಿನಯ ಪೂಜಾರಿ, ಕೋಶಾಧಿಕಾರಿ ವಿಶ್ವನಾಥ ದಡ್ಡು, ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಕೃಷ್ಣ ಸಾಲ್ಯಾನ್, ಗೌರವಾಧ್ಯಕ್ಷೆ ಶಶಿಕಲಾ ಸಂಕಲಕರಿಯ, ಕಾರ್ಯದರ್ಶಿ ಚಾಂದಿನಿ, ಕೋಶಾಧಿಕಾರಿ ಯಶೋಧ ಉಪಸ್ಥಿತರಿದ್ದರು.
ಸಂಚಾಲಕ ಉದಯ ಕುಮಾರ್ ಮುಂಡ್ಕೂರು ಸ್ವಾಗತಿಸಿ, ಲತೀಶ್ ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ 90% ಅಧಿಕ ಅಂಕ ಗಳಿಸಿದ ಎಸ್ಎಸ್ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಬಳಿಕ ವಿವಿಧ ಬಗೆಯ ಆಟಿಯ ತಿನಸುಗಳನ್ನು ಉಣಬಡಿಸಲಾಯಿತು.







