ಕುಂದಾಪುರ : ಪಡುಕೋಣೆ ವ್ಯವಸಾಯ ಸೇವಾ ಸಹಕಾರ ಸಂಘ ನಿ.ನಾಡ ಬೈಂದೂರು ಕೋ ಆಪರೇಟಿವ್ ಸೊಸೈಟಿಯಲ್ಲಿ ಆರ್.ಬಿ.ಐ ನಿಯಮಗಳನ್ನು ಗಾಳಿಗೆ ತೂರಿ ಇತರೆ ಕೋ- ಆಪರೇಟಿವ್ ಸೊಸೈಟಿಗಳ ಹಣವನ್ನು ತಮ್ಮ ಸೊಸೈಟಿಯಲ್ಲಿ ಖಾತೆ ತೆರೆಯಲು ಅವಕಾಶ ನೀಡುವ ಮೂಲಕ ಇತರೆ ಸೊಸೈಟಿಗಳ ಅಕ್ರಮ ಹಣಗಳನ್ನು ತಮ್ಮ ಖಾತೆಗಳಲ್ಲಿ ಜಮೆ ಮಾಡಿ ವಂಚಿಸುತ್ತಿದ್ದಾರೆ ಎಂಬಾ ಕೂಗು ಕೇಳಿ ಬರುತ್ತಿದೆ.ಒಂದು ಮೂಲಗಳ ಪ್ರಕಾರ ಇದೀಗ ಅಧಿಕೃತ ಮಾಹಿತಿ ಬಹಿರಂಗಗೊಂಡಿದೆ.
“ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಕಲಂ 58ರ ವ್ಯತಿರಿಕ್ತವಾಗಿ ಬೇರೆ ಸಂಘ ಸಂಸ್ಥೆಗಳಲ್ಲಿ, ಸೌಹಾರ್ದ ಸಹಕಾರಿಗಳಲ್ಲಿ ( ಶೇರು ಮತ್ತು ಭದ್ರತಾ ಪತ್ರಗಳಲ್ಲಿ ಹೊರತುಪಡಿಸಿ) ವ್ಯವಹಾರ ನಡೆಸಲು ಖಾತೆಗಳನ್ನು ಹೊಂದಿದ್ದಾರೆಯೆ? ಹೊಂದಿದಲ್ಲಿ ಆಕ್ಷೇಪಿಸಿ, ಮುಕ್ತಾಯಗೊಳಿಸಲು ಸೂಚಿಸುವುದು.” ಅಧಿನಿಯಮ ಕಲಂ 58ರ ನಿಯಮಾವಳಿಯಂತೆ ಯಾವುದೇ ಹಣಕಾಸು ವ್ಯವಹಾರ ನಡೆಸುವ ಸೊಸೈಟಿ ಇನ್ನೊಂದು ಸೊಸೈಟಿಯ ಖಾತೆ ಯಲ್ಲಿ ತನ್ನ ಗ್ರಾಹಕರ ಹಣವನ್ನು ಇರಿಸಲು ಅವಕಾಶವಿರುವುದಿಲ್ಲ.ಈ ಮೂಲಕ ಗ್ರಾಹಕರ ಹಣಕ್ಕೆ ಭದ್ರತೆ ಇಲ್ಲದಂತಾಗುತ್ತದೆ.
ಅಲ್ಲದೆ, ಡೈರೆಕ್ಟರ್ ರಾಜೀವ ಮೊಗವೀರರವರು ಸಂಘದ ಮೊರ್ಗೆಜ್ ಸಾಲ ನೀಡಲು ಮುಂಚಿತವಾಗಿ ನೊಂದಾಯಿತ ಇಂಜಿನೀಯರ್ ಜೊತೆ ಸೇರಿ ಸ್ತಿರಾಸ್ತೀಯ ವ್ಯಾಲ್ಯೂವೆಷನ್ ನನ್ನು ತಮಗೆ ಬೇಕಾದ ರೀತಿಯಲ್ಲಿ ವ್ಯಾಲ್ಯೂ ವೇಷನ್ ಮಾಡಿಸಿಕೊಂಡು ಅಕ್ರಮ ಸಾಲ ಪಡೆದಿರುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗುಸು ಗುಸು ಚರ ಚರ ಕೇಳಿ ಬರುತ್ತಿದೆ. ಉದಾಹರಣೆಗೆ 5000 ರೂಪಾಯಿಗೆ ಮೌಲ್ಯವಿರುವ ಭೂಮಿಯನ್ನು 50000 ಸಾವಿರಕ್ಕೆ ಬೆಲೆ ಬಾಳುತ್ತದೆ ಎಂದು ತೋರಿಸಿ ಅಕ್ರಮವಾಗಿ ಮೋರ್ಗೇಜ್ ಸಾಲ ಪಡೆದಿರುತ್ತಾರೆ. ಈ ರೀತಿಯಾಗಿ ಕೋ ಆಪರೇಟಿವ್ ಆಕ್ಟ್ ಅನ್ನು ಗಾಳಿಗೆ ತೂರಿ,ತಮ್ಮ ಬೇಳೆ ಬೇಯಿಸಿಕೊಂಡಿರುವುದು ಸ್ಪಷ್ಟ ವಾಗಿ ಬೆಳಕಿಗೆ ಬಂದಿರುತ್ತದೆ.ಈ ಜಾಗಗಳ ಬೋಗಸ್ ಅಡಮಾನ ಸಾಲವನ್ನು ತೆಗೆದಿರುವುದರ ಬಗ್ಗೆ D.R ರವರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಸತ್ಯ ಅಸತ್ಯತೆಯನ್ನು ಎತ್ತಿ ಹಿಡಿದು ಗ್ರಾಹಕರಿಗೆ ನ್ಯಾಯ ಕೊಡಿಸಬೇಕೆಂದು ಹೆಚ್ಚಿನ ಸದಸ್ಯರೂ ಆಗ್ರಹಿಸಿರುತ್ತಾರೆ.
ಈ ಬಗ್ಗೆ ವಂಚನೆಗೊಳಗಾದ ಗ್ರಾಹಕರಿಗೆ ನ್ಯಾಯ ದೊರಕಬೇಕಾದರೆ ಸಂಬಂಧ ಪಟ್ಟ ಇಲಾಖೆಯು ಈ ಸೊಸೈಟಿ ಯಲ್ಲಿರುವ ಇತರ ಸೊಸೈಟಿಗಳ ಖಾತೆಯಲ್ಲಿರುವ ಹಣವು ಅಕ್ರಮವೋ ಏನು ಎಂಬ ಬಗ್ಗೆ ತನಿಖೆ ನಡೆಸಬೇಕು.ಯಾವುದೇ ಸೊಸೈಟಿಯ ಗ್ರಾಹಕರಿಗೆ ವಂಚನೆ ಯಾಗದಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರು/ಸದಸ್ಯರು ಆರೋಪಿಸಿದ್ದಾರೆ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಹಕರಿಗೆ ನ್ಯಾಯ ಕೊಡಿಸುವರೆ..?

