Home Crime ಪಡುಬಿದ್ರೆ: ಶಾಂಭವಿ ನದಿಯಲ್ಲಿ ಕಂಬಳ ಸಂಘಟಕ, ಉದ್ಯಮಿ ಅಭಿಷೇಕ್‌ ಆಳ್ವ ಶವ ಪತ್ತೆ…!!

ಪಡುಬಿದ್ರೆ: ಶಾಂಭವಿ ನದಿಯಲ್ಲಿ ಕಂಬಳ ಸಂಘಟಕ, ಉದ್ಯಮಿ ಅಭಿಷೇಕ್‌ ಆಳ್ವ ಶವ ಪತ್ತೆ…!!

ಪಡುಬಿದ್ರೆ : ಕಂಬಳ ಸಂಘಟಕ, ಉದ್ಯಮಿ ಅಭಿಷೇಕ್‌ ಆಳ್ವರವರ ಶವ ಶಾಂಭವಿ ನದಿಯಲ್ಲಿ ಪತ್ತೆಯಾಗಿದೆ.

ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್‌ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ವಾಮಂಜೂರು ತಿರುವೈಲುಗುತ್ತು ಕಂಬಳವನ್ನು ಅತ್ಯಂತ ಶಿಸ್ತುಬದ್ಧ ಕಂಬಳ ಎಂದು ಹೆಸರು ಮಾಡುವಲ್ಲಿ ಪ್ರಮುಖ ಕಾರಣರಾಗಿದ್ದರು.

ಬುಧವಾರ ತನ್ನ ಸ್ನೇಹಿತರೊಂದಿಗೆ ಊಟ ಮುಗಿಸಿ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಗುರುವಾರ ಸಂಜೆ ಮೂಲ್ಕಿ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು.

ಅಭಿಷೇಕ್‌ ನಾಪತ್ತೆ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದೆ.