ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕಳ್ಳರು ಮನೆಯೊಂದರ ಬಾಗಿಲು ತೆಗೆದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೆಳ್ಳಿ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಕಸಬಾ ಗ್ರಾಮದ ರವೀಂದ್ರ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿದಾರರಾದ ಪಿ ರವೀಂದ್ರ (57) ಕಸಬಾ ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರು ದಿನಾಂಕ 18/07/2025 ರಂದು ಸಂಸಾರ ಸಮೇತ ವಾರಣಾಸಿ ಯಾತ್ರೆಗೆ ಹೋಗುವಾಗ ಮನೆಯ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು. ದಿನಾಂಕ 20/07/2025 ರಂದು ಪಿರ್ಯಾದಿದಾರರು ಗಯಾದಲ್ಲಿರುವಾಗ ಸಂಜೆ ಸುಮಾರು 05:00 ಗಂಟೆಯ ಸಮಯಕ್ಕೆ ನನ್ನ ಸಂಭಂದಿಕರಾದ ಕಿರಣ ರವರು ಕರೆ ಮಾಡಿ ಮನೆಯ ಬಾಗಿಲು ತೆರೆದಿರುವುದು ಕಂಡುಬರುತ್ತಿ ರುವುದಾಗಿ ನೀಡಿದ ಮಾಹಿತಿಯಂತೆ ಪಿರ್ಯಾದಿದಾರರು ಪ್ರವಾಸವನ್ನು ಅರ್ದಕ್ಕೆ ಕೈ ಬಿಟ್ಟು ದಿನಾಂಕ 22/07/2025 ರಂದು ಬೆಳಿಗ್ಗೆ ಬಂದು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು. ಯಾರೋ ಕಳ್ಳರು ಯಾವುದೋ ವಸ್ತುವಿನಿಂದ ಮೀಟಿ ತುಂಡರಿಸಿ ಮನೆಯೊಳಗೆ ಪ್ರವೇಶಿಸಿ ಮನೆಯ ಮಲಗುವ ಕೋಣೆಯ ಗಾರ್ಡೇಜ್ ನ ಬೀಗವನ್ನು ಮುರಿದು ಅದರ ಒಳಗಿನ ಇಟ್ಟಿದ್ದ. 1)ಸುಮಾರು 9 ಇಂಚಿನ ಬೆಳ್ಳಿಯ ದೊಡ್ಡ ಹರಿವಾಣ -1ಅಂದಾಜು ತೂಕ 800 ಗ್ರಾಂ, 2) ಸುಮಾರು 6 ಇಂಚಿನ ಬೆಳ್ಳಿಯ ಸಣ್ಣ ಹರಿವಾಣ-1 ಅಂದಾಜು ತೂಕ 600 ಗ್ರಾಂ, 3) ಸುಮಾರು 4 ಇಂಚಿನ ಬೆಳ್ಳಿಯ ಸಣ್ಣ ಹರಿವಾಣ-02 ಅಂದಾಜು ತೂಕ 600 ಗ್ರಾಂ 4) ಸುಮಾರು 9 ಇಂಚು ಎತ್ತರದ ಬೆಳ್ಳಿಯ ಲಕ್ಷ್ಮಿ ಚಿತ್ರವಿರುವ ತಂಬಿಗೆ -01ಅಂದಾಜು ತೂಕ 900 ಗ್ರಾಂ, 5) ಸುಮಾರು 4 ಇಂಚು ಎತ್ತರದ ಬೆಳ್ಳಿಯ ಲಕ್ಷ್ಮಿ ದೀಪ -01 ಅಂದಾಜು ತೂಕ -300 ಗ್ರಾಂ, 6) ಸುಮಾರು 7 ಇಂಚು ಎತ್ತರದ ಬೆಳ್ಳಿಯ ಲೋಟ -01 ಅಂದಾಜು ತೂಕ -600 ಗ್ರಾಂ, 7) ಸುಮಾರು 4 ಇಂಚು ಎತ್ತರದ ಬೆಳ್ಳಿಯ ಲೋಟ -03 ಅಂದಾಜು ತೂಕ -600 ಗ್ರಾಂ, 8) ಸುಮಾರು 3 ಇಂಚು ಎತ್ತರದ ಬೆಳ್ಳಿಯ ಕುಂಕುಮದ ತಟ್ಟೆ -01 ಅಂದಾಜು ತೂಕ -200 ಗ್ರಾಂ, 9) ಸುಮಾರು 6 ಇಂಚು ಎತ್ತರದ ಬೆಳ್ಳಿಯಕಾಲು ದೀಪ -02 ಅಂದಾಜು ತೂಕ -400 ಗ್ರಾಂ, 10) ಸುಮಾರು 6 ಇಂಚು ಉದ್ದದ ಬೆಳ್ಳಿಯ ಆರತಿ -01 ಅಂದಾಜು ತೂಕ -250 ಗ್ರಾಂ, 11)ಸುಮಾರು 22 ಗ್ರಾಂ ತೂಕದ ಚಿನ್ನದ 7 ವಜ್ರದ ಹರಳಿನ ಬೆಂಡೋಲೆ ಒಂದು ಜೊತೆ(2) ಕಿವಿ ಚೈನ್ (2) ಸಮೇತ, 12) 5 ರೂ ಕಾಯಿನ್ 7500/- ನಗದು ರೂ 40000/- ರೂಪಾಯಿಗಳು ಈ ಮೇಲಿನ ಸ್ವತ್ತುಗಳನ್ನು ದಿನಾಂಕ 18/07/2025 ರಂದು ಬೆಳಿಗ್ಗೆ 07:00 ಗಂಟೆಯಿಂದ ದಿನಾಂಕ 20/07/2025 ರ ಸಂಜೆ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಒಟ್ಟು ಅಂದಾಜು ಬೆಲೆ 4,57,000/- ರೂಪಾಯಿಗಳು ಆಗಬಹುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 92/2025 ಕಲಂ: 331(4), 331(3) 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.