ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ-ಮೂಡುಬಿದಿರೆ ರಸ್ತೆಯ ನೇಕಾರ ಕಾಲೋನಿ ಕ್ರಾಸ್ ಬಳಿ ಬೈಕ್‌ಗೆ ಇನ್ನೊಂದು ಬೈಕ್ ಹಿಂದಿನಿಂದ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಾವನ್ನಪ್ಪಿದ ಬೈಕ್ ಸವಾರ ಪ್ರಸಾದ್ ಎಂದು ತಿಳಿಯಲಾಗಿದೆ.
ದೂರುದಾರ ಮಂಜುನಾಥ ಭಟ್ ಎಂಬವರ ಬೈಕ್‌ಗೆ ಪ್ರಸಾದ್ ಎಂಬವರ ಇನ್ನೊಂದು ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದಿತ್ತು ಎಂದು ತಿಳಿದು ಬಂದಿದೆ.ಘಟನೆಯಿಂದ ಎರಡೂ ಬೈಕ್‌ಗಳ ಸವಾರರಾದ ಮಂಜುನಾಥ್ ಭಟ್ ಮತ್ತು ಪ್ರಸಾದ್ ಎಂಬವರು ರಸ್ತೆಗೆ ಎಸೆಯಲಟ್ಟಿದ್ದರು. ಮಂಜುನಾಥ ಭಟ್ ಅವರ ಕಾಲಿಗೆ ಗಾಯವಾಗಿತ್ತು. ಪ್ರಸಾದ್ ಅವರ ಕೈಗೆ ಮತ್ತು ತಲೆಗೆ ಗಾಯವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



