ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೊಬ್ಬರು ಮನೆಯ ಹಿಂದುಗಡೆ ಗದ್ದೆಯಲ್ಲಿರುವ ಮಾವಿನ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಆತ್ಮಹತ್ಯೆಗೆ ಶರಣಾದವರು ಸುಕೇಶ ಕುಂದರ್ ಎಂದು ತಿಳಿದು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರ ಶಕುಂತಲಾ (46) ಗಂಡ: ಸುರೇಶ ಕುಂದರ್, ಅನುಗ್ರಹ ನಿಲಯ, ಬೆನಗಲ್, ಕೊಕ್ಕರ್ಣೆ, ಪಜೆಮಂಗೂರು ಗ್ರಾಮ ಇವರ ಗಂಡ ಸುಕೇಶ ಕುಂದರ್ ಪ್ರಾಯ 54 ವರ್ಷ ಎಂಬುವರು ಬೆಂಗಳೂರು ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿರುವವರು ಅನಾರೋಗ್ಯ ನಿಮಿತ್ಯ ಊರಿಗೆ ಬಂದಿದ್ದು, ಪೀರ್ಯಾದಿದಾರರು ದಿನಾಂಕ: 01/11/2025 ರಂದು 20.00 ಗಂಟೆಗೆ ನೆರೆ ಮನೆಯವರ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸು ಮನೆಗೆ ಬಂದಾಗ ಮನೆಯಲ್ಲಿದ್ದ ಗಂಡ ಮನೆಯಲ್ಲಿ ಇಲ್ಲದ ಇದ್ದಾಗ ಹುಡುಕಾಡಿದ್ದಲ್ಲಿ ಮನೆಯ ಹಿಂದುಗಡೆ ಗದ್ದೆಯಲ್ಲಿರುವ ಮಾವಿನ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ರಾತ್ರಿ 20.30 ಗಂಟೆಯಿಂದ 21.30 ಗಂಟೆಯ ಮಧ್ಯಾವಧಿಯಲ್ಲಿಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಗಂಡನಿಗೆ ಇದ್ದ ಮೂಲವ್ಯಾದಿ ಕಾಯಿಲೆಯಿಂದ ಮನನೊಂದು ಅಥವಾ ಇನ್ನಾವುದೋ ಕಾರಣದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಬ್ರಹ್ಮಾವರ ಠಾಣೆ, ಅಪರಾಧ ಕ್ರಮಾಂಕ:76/2025 ಕಲಂ: 194 ರಂತೆ ಪ್ರಕರಣ ದಾಖಲಾಗಿರುತ್ತದೆ.



