Home Crime ಬೆಳ್ತಂಗಡಿ: ಲಾರಿ ನಿಲ್ಲಿಸಿ ಇಳಿದು ಹೋಗುತ್ತಿದ್ದಾಗ ಹೆದ್ದಾರಿ ಬದಿಯ ಚರಂಡಿಗೆ ಬಿದ್ದು ಮೃತ್ಯು…!!

ಬೆಳ್ತಂಗಡಿ: ಲಾರಿ ನಿಲ್ಲಿಸಿ ಇಳಿದು ಹೋಗುತ್ತಿದ್ದಾಗ ಹೆದ್ದಾರಿ ಬದಿಯ ಚರಂಡಿಗೆ ಬಿದ್ದು ಮೃತ್ಯು…!!

ಬೆಳ್ತಂಗಡಿ: ರೇಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಲಾರಿ ಚಾಲಕನೋರ್ವ ರಸ್ತೆ ಬದಿ ಲಾರಿ ನಿಲ್ಲಿಸಿ ಇಳಿದು ಹೋಗುತ್ತಿದ್ದ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಾಂಕ್ರಿಟ್ ಚರಂಡಿಯೊಳಗೆ ಬಿದ್ದು ಮೃತಪಟ್ಟ ಘಟನೆ ರೇಖ್ಯಾ ಗ್ರಾಮದ ನೇಲ್ಯಡ್ಕ ಎಂಬಲ್ಲಿ ಬುಧವಾರ ಸಂಭವಿಸಿದೆ.

ಮೃತ ಲಾರಿ ಚಾಲಕನನ್ನು ಬೆಂಗಳೂರು-ನೆಲಮಂಗಳ ನಿವಾಸಿ ಹುನಮಂತರಾಯಪ್ಪ (60) ಎಂದು ಗುರುತಿಸಲಾಗಿದೆ.

ಈ ಕುರಿತು ಅವರ ಪುತ್ರ ರಾಜಶೇಖ‌ರ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹುನಮಂತರಾಯಪ್ಪನವರು ಮಂಗಳೂರಿನಿಂದ ಬೆಂಗಳೂರು ಕಡೆಗೆ ಲಾರಿ ಚಲಾಯಿಸಿಕೊಂಡು ಬಂದು ಮಧ್ಯರಾತ್ರಿ ಬೆಳ್ತಂಗಡಿಯ ರೇಖ್ಯಾ ಗ್ರಾಮ ನೇಲ್ಯಡ್ಕ ಎಂಬಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಲಾರಿಯಿಂದ ಇಳಿದು ರಸ್ತೆ ಬದಿಗೆ ಹೋಗುವಾಗ ಆಕಸ್ಮಿಕವಾಗಿ ರಸ್ತೆ ಕಾಮಗಾರಿಯಲ್ಲಿರುವ ಕಾಂಕ್ರೀಟ್ ಚರಂಡಿಯ ಒಳಗೆ ಬಿದ್ದಿದ್ದಾರೆ. ತೀವ್ರ ಅಸ್ವಸ್ಥರಾದ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.