ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ವ್ಯಕ್ತಿಯೋರ್ವರು ತೋಟಕ್ಕೆ ಹಾಕಲು ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಸುರೇಶ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾಧಿದಾರ ಶಾಂತಾ (37)ಗಂಡ: ಸುರೇಶ ವಾಸ: ಕೆಳ ಕೈರಾಣ ಬಲಿಗೋಣ ಕಾಲ್ತೋಡು ಗ್ರಾಮ ಬೈಂದೂರು ಇವರ ಗಂಡ ಸುರೇಶ (50 ವರ್ಷ) ರವರು ದಿನಾಂಕ: 01/11/2025 ರಂದು ಬೆಳಿಗ್ಗೆ 10:30 ಫಿರ್ಯಾದಿದಾರರ ಮನೆಯ ಹತ್ತಿರದ ಬಲಿಗೋಣ ಮಂಜುನಾಥ ಹೆಬ್ಬಾರರವರ ಮನೆಗೆ ತೋಟದ ಕೆಲಸಕ್ಕೆ ಹೋಗಿದ್ದು ಸುಮಾರು 10:30 ಗಂಟೆಗೆ ತೋಟಕ್ಕೆ ಹಾಕಲು ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಅವರನ್ನು ಕೂಡಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ರಾತ್ರಿ 10:30 ಗಂಟೆಗೆ ಅಲ್ಲಿನ ವೈದ್ಯರು ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಫಿರ್ಯಾದಿದಾರರ ಗಂಡನು ಮಂಜುನಾಥ ಹೆಬ್ಬಾರವರ ಮನೆಯ ತೋಟದ ಕೆಲಸಕ್ಕೆ ಹೋದವರು ಮರ ಹತ್ತಿ ಸೋಪ್ಪು ಕಡಿಯುತ್ತಿರುವಾಗ ಆಕಸ್ಮಿಕವಾಗಿ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ತಲೆಯ ಭಾಗಕ್ಕೆ ಆದ ತಿವ್ರ ಗಾಯದಿಂದ ಮೃತಪಟ್ಟಿರುವುದಾಗಿದೆ.ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ: 52/2025 ಕಲಂ 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



