ಮಂಗಳೂರು: ಫೇಸ್‌ಬುಕ್‌ನಲ್ಲಿ ಕಂಡ ಉಚಿತ ಟಿವಿ ಚಾನೆಲ್ ಜಾಹೀರಾತು ನಂಬಿ ಆಪ್ ಡೌನ್‌ಲೋಡ್ ಮಾಡಿದ ವ್ಯಕ್ತಿಗೆ ₹1,78,191 ರೂಪಾಯಿ ವಂಚನೆಯಾಗಿರುವ ಘಟನೆ ನಡೆದಿದೆ.
ಪಿರ್ಯಾದಿದಾರರು (44) ಅ.15 ರಂದು ಮನೆಯಲ್ಲಿ ಫೇಸ್‌ಬುಕ್ ನೋಡುವಾಗ ‘XM TV – ಎಲ್ಲಾ ಟಿವಿ ಚಾನೆಲ್‌ಗಳು ಉಚಿತ, ಆಪ್ ಡೌನ್‌ಲೋಡ್ ಮಾಡಿ’ ಎಂಬ ಜಾಹೀರಾತು ಕಂಡಿದೆ. ಅದರ ಮೇಲೆ ಕ್ಲಿಕ್ ಮಾಡಿ ಆಪ್ ಡೌನ್‌ಲೋಡ್ ಮಾಡಿದ್ದಾರೆ.
ನಂತರ ಅ.16 ರಂದು ₹98,000 ಮತ್ತು ಅ.17 ರಂದು ₹50,000 ಕರ್ನಾಟಕ ಬ್ಯಾಂಕ್ ಖಾತೆಯಿಂದ ಹಾಗೂ ಅ.16 ರಂದು ಯೂನಿಯನ್ ಬ್ಯಾಂಕ್ ಖಾತೆಯಿಂದ ₹30,191 ಹಣ ಅವರಿಗೆ ತಿಳಿಯದಂತೆ ಅಪರಿಚಿತ ವ್ಯಕ್ತಿಯ ಖಾತೆಗೆ UPI ಮೂಲಕ ವರ್ಗಾವಣೆಯಾಗಿದೆ.
ಅ.18 ರಂದು ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ಇಲ್ಲದಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಅನುಮಾನಾಸ್ಪದ APK ಫೈಲ್ ಡೌನ್‌ಲೋಡ್ ಆಗಿರುವುದು ಕಂಡುಬಂದಿದೆ. XM TV ಆಪ್ ಜೊತೆಗೆ ಮಾಲ್‌ವೇರ್ ಇರುವ APK ಫೈಲ್ ಇನ್‌ಸ್ಟಾಲ್ ಆಗಿ ಬ್ಯಾಂಕ್ ಮಾಹಿತಿ ಕದ್ದು ಹಂತ ಹಂತವಾಗಿ ಒಟ್ಟು ₹1,78,191 ದೋಚಲಾಗಿದೆ.
ಈ ಕುರಿತು ಮಂಗಳೂರು CEN ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಎಚ್ಚರಿಕೆ: ಅಪರಿಚಿತ ಲಿಂಕ್, ಉಚಿತ ಟಿವಿ/OTT ಆಪ್ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಬೇಡಿ, APK ಫೈಲ್ ಇನ್‌ಸ್ಟಾಲ್ ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.



