ಮಹಾರಾಷ್ಟ್ರ: ಪ್ರಿಯತಮೆಯೊಂದಿಗೆ ಟ್ರಕ್ಕಿಂಗ್ ಗೆ ತೆರಳಿದ್ದ ಯುವಕನೋರ್ವ ಸೆಲ್ವಿ ಕ್ಲಿಕ್ಕಿಸುವ ವೇಳೆ ಆಯತಪ್ಪಿ ಆಳವಾದ ಕಣಿವೆಗೆ ಬಿದ್ದು ಮೃತಪಟ್ಟ ಘಟನೆ ಮಹಾರಾಷ್ಟ್ರದ ಲೋಹಾಗಡ್ ಕೋಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು 26 ವರ್ಷದ ಕೇತನ್ ವಿಶಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರು ಪೂನಾದ ರಿಯಲ್ ಎಸ್ಟೇಟ್ ಉದ್ಯಮಿಯ ಪುತ್ರ ಎಂದು ತಿಳಿದು ಬಂದಿದೆ. ಕೇತನ್ ವಿಶಾಲ್ ಅವರು ತಮ್ಮ ಪ್ರಿಯತಮೆಯ ಹುಟ್ಟುಹಬ್ಬ ಆಚರಿಸಲು ಇತರ ಇಬ್ಬರು ಸ್ನೇಹಿತರೊಂದಿಗೆ ಲೋಹಾಗಡ್ ಕೋಟೆಗೆ ತೆರಳಿದ್ದರು. ಅಲ್ಲಿ ಫೋಟೋ ಕ್ಲಿಕ್ಕಿಸುವ ವೇಳೆ ಸುಮಾರು 400 ಅಡಿ ಆಳದ ಕಣಿವೆಗೆ ಬಿದ್ದಿದ್ದರು.
ಅಲ್ಲಿಂದ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




