Home Dskshina Kannada ಮೂಡುಬಿದ್ರೆ : ಸಿಡಿಲು ಬಡಿದು ಮನೆಗೆ ಹಾನಿ…!!

ಮೂಡುಬಿದ್ರೆ : ಸಿಡಿಲು ಬಡಿದು ಮನೆಗೆ ಹಾನಿ…!!

ಮೂಡುಬಿದ್ರೆ : ಪುತ್ತಿಗೆ ಗ್ರಾಮದ ಗುಂಡ್ಯಡ್ಕ ಶ್ರೀನಿವಾಸಪುರದ ವಿಠೋಭ ಭಜನಾ ಮಂದಿರದ ಬಳಿ ಮನೆಗೆ‌ ಸಿಡಿಲು ಬಡಿದು ಹಾನಿಯಾದ ಘಟನೆ ರಾತ್ರಿ ನಡೆದಿದೆ.

ಶೇಖರ ಪೂಜಾರಿ ಅವರ ಮನೆಗೆ ಶುಕ್ರವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಸಿಡಿಲಿನಿಂದ ಮನೆಯ ವಿದ್ಯುತ್ ಉಪಕರಣಗಳು, ವಿದ್ಯುತ್ ಮೀಟರ್ ಹಾಗೂ ವಿದ್ಯುತ್ ತಂತಿಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ.

ಅಲ್ಲದೇ ಮನೆಯ ಗೋಡೆಯೂ ಹಾನಿಗೊಂಡು ಹುಡಿಯಾಗಿ ಕೆಳಗೆ ಬಿದ್ದಿದೆ. ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.