Home Crime ಮೂಡುಬಿದಿರೆ : ಬೆಳುವಾಯಿ ಬಳಿ ಭೀಕರ ಆಫಘಾತ : ಬೈಕ್ ಸವಾರ ಬಲಿ…!!

ಮೂಡುಬಿದಿರೆ : ಬೆಳುವಾಯಿ ಬಳಿ ಭೀಕರ ಆಫಘಾತ : ಬೈಕ್ ಸವಾರ ಬಲಿ…!!

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಹೋಮಲ್ಕೆ ನವಮಿ ಕುಡ್ವರ ಮನೆ ಬಳಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಆಫಘಾತದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಟೋ ಚಾಲಕರು ಆಸ್ಪತ್ರೆಗೆ ಕೊಂಡೋಯ್ದಿದ್ದಾರೆ. ವೇಗ ಹಾಗೂ ಅಜಾಗರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.