Home Crime ವೃದ್ಧೆಯೋರ್ವರು ಮನೆಯ ಅಂಗಳದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತ್ಯು…!!

ವೃದ್ಧೆಯೋರ್ವರು ಮನೆಯ ಅಂಗಳದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತ್ಯು…!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವೃದ್ಧೆಯೋರ್ವರು ಮನೆಯ ಅಂಗಳದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆ ಸುಂದರಿ ಮಡಿವಾಳ್ತಿ ಎಂದು ತಿಳಿಯಲಾಗಿದೆ.

ಪ್ರಕರಣದ ವಿವರ : ಪಿರ್ಯಾದಿ ಶೇಖರ ಮಡಿವಾಳ ಪ್ರಾಯ:52, ಮುಡಾರು ಗ್ರಾಮ ,ಕಾರ್ಕಳ ತಾಲೂಕು ಇವರ ತಾಯಿ ಶ್ರೀಮತಿ ಸುಂದರಿ ಮಡಿವಾಳ್ತಿ ಪ್ರಾಯ 85 ವರ್ಷ ಇವರು ತನ್ನ ಮಗಳು ಪ್ರೇಮಾಳೊಂದಿಗೆ ಮುಡಾರು ಗ್ರಾಮದ ಗರಡಿಗುಡ್ಡೆ ಎಂಬಲ್ಲಿ ವಾಸವಾಗಿದ್ದು.ದಿನಾಂಕ 27/07/2025 ರಂದು ಸಂಜೆ 06 :45 ಗಂಟೆಯ ಸುಮಾರಿಗೆ ಪಿರ್ಯಾದುದಾರರು ತಾಯಿ ಸುಂದರಿ ಮಡಿವಾಳ್ತಿ ರವರನ್ನು ಮಾತಾನಾಡಿಸಿಕೊಂಡು ತನ್ನ ಮನೆಗೆ ಹೋಗಿದ್ದು ಬಳಿಕ ನೆರೆಮನೆಯಲ್ಲಿರುವ ಪಿರ್ಯಾದುದಾರರ ಅತ್ತಿಗೆ ಪ್ರಭಾವತಿಯವರು ಕರೆ ಮಾಡಿ ತಾಯಿ ಮನೆಯಲ್ಲಿ ಕಾಣಿಸುವುದಿಲ್ಲ ಎಂಬುದಾಗಿ ತಿಳಿಸಿದ್ದು ಹುಡುಕಲಾಗಿ ನನ್ನ ತಾಯಿಯ ಮೃತ ದೇಹವು ಮನೆಯ ಅಂಗಳದಲ್ಲಿರುವ ಬಾವಿಯಲ್ಲಿ ತೇಲುತ್ತಿತ್ತು. ದಿನಾಂಕ 27/07/2025 ರಂದು ಸಾಯಂಕಾಲ 07 :00 ಗಂಟೆಯಿಂದ 07 :30 ಗಂಟೆಯ ನಡುವಿನ ಅವಧಿಯಲ್ಲಿ ಯಾವುದೋ ಕಾರಣಕ್ಕೆ ನನ್ನ ತಾಯಿಯವರು ಮನೆಯ ಅಂಗಳಕ್ಕೆ ಹೋದವರು ಮನೆಯ ಅಂಗಳದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 38/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.