Home Karavali Karnataka ಅಧಿಕಾರಿಗಳ ನಿರ್ಲಕ್ಷ ಕಾರ್ಕಳ‌ ಪಳ್ಳಿ ಗ್ರಾಮಕ್ಕೆ ಬರದ ಶಕ್ತಿ ಯೋಜನೆಯ ಬಸ್ಸ್ ಆಕೋಶ ಹೊರಹಾಕಿದ ಗ್ಯಾರಂಟಿ...

ಅಧಿಕಾರಿಗಳ ನಿರ್ಲಕ್ಷ ಕಾರ್ಕಳ‌ ಪಳ್ಳಿ ಗ್ರಾಮಕ್ಕೆ ಬರದ ಶಕ್ತಿ ಯೋಜನೆಯ ಬಸ್ಸ್ ಆಕೋಶ ಹೊರಹಾಕಿದ ಗ್ಯಾರಂಟಿ ಸಮಿತಿ ಅಧ್ಯಕ್ಷ…!!

ಉಡುಪಿ : ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು ಜನರ ಪರವಾಗಿ ಧ್ವನಿ ಎತ್ತಿ ಸರಕಾರದ ಯೋಜನೆ ಜನರಿಗೆ ತಲುಪಲು ಅಡ್ಡಿ ಪಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಧರಣಿ ಕುಳಿತು ಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಕಳ ತಾಲೂಕಿನ ಪಳ್ಳಿ ಕಣಜಾರು ಮಾರ್ಗವಾಗಿ ಬಸ್ ಸಂಚಾರ ಕೆಲ ತಿಂಗಳ ಹಿಂದೆ ಆರಂಭ ಆಗಿ ಕೆಲವೇ ದಿನಗಳಲ್ಲಿ ಸಂಚಾರ ನಿಲ್ಲಿಸಿದೆ ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿ ತಕ್ಷಣವೆ ಸರಕಾರಿ ಬಸ್ ಸಂಚಾರ ಆರಂಭಿಸುವಂತೆ ಅಗ್ರಹ ಪಡಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ಗ್ಯಾರಂಟಿ ಅದಾಲತ್ ನಡೆಸಿ ಸರಕಾರಾದ ಯೋಜನೆಯಿಂದ ವಂಚಿತರಾಗಿರುವವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಜನ ಮನ್ನಣೆ ಗಳಿಸಿರುವ ಅಜಿತ್ ಹೆಗ್ಡೆ ಅವರ ಕಾರ್ಯವೈಖರಿ ಬಗ್ಗೆ ಕಾರ್ಕಳ ತಾಲೂಕಿನ ಜನತೆ ಹೆಮ್ಮೆ ಪಡುವಂತೆ ಆಗಿದೆ.