Home Crime ಕೋಟ : ಕ್ರಿಕೆಟ್ ಬೆಟ್ಟಿಂಗ್ ದಂಧೆ : ಆರೋಪಿಯ ಬಂಧನ…!!

ಕೋಟ : ಕ್ರಿಕೆಟ್ ಬೆಟ್ಟಿಂಗ್ ದಂಧೆ : ಆರೋಪಿಯ ಬಂಧನ…!!

ಕೋಟ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಗಂಗಾಧರ್ ಎಂದು ಗುರುತಿಸಲಾಗಿದೆ.

ಆರೋಪಿ ಬಳಿ ಇದ್ದ ನಗದು ಮತ್ತು ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ದಿನಾಂಕ 03.05.2025 ರಂದು ರಾಘವೇಂದ್ರ.ಸಿ, ಪೊಲೀಸ್‌ ಉಪನಿರೀಕ್ಷಕರು, ಕೋಟ ಪೊಲೀಸ್‌ ಠಾಣೆ ಇವರಿಗೆ ರಾತ್ರಿ 9:00 ಗಂಟೆಗೆ ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ತೆಕ್ಕಟ್ಟೆ ಫಿಶ್‌ ಮಾರ್ಕೇಟ್ ಸಮೀಪದಲ್ಲಿ ಕೆಲಮಂದಿ ಯುವಕರು ಜೊತೆಯಾಗಿ ಸೇರಿಕೊಂಡು ಈ ದಿನ ಬೆಂಗಳೂರಿನ ಇಂಟರ್‌ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ RCB (ರಾಯಲ್ ಚಾಲೆಂಜ್ ಬೆಂಗಳೂರು) ಮತ್ತು CSK ( ಚೆನೈ ಸೂಪರ್ ಕಿಂಗ್ಸ್)ತಂಡಗಳ ನಡುವೆ ನಡೆಯುವ IPL T20 ಕ್ರಿಕೆಟ್‌ ಮ್ಯಾಚ್‌ಗೆ ಸಂಬಂಧಪಟ್ಟು, ಸಾವರ್ಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಹಾಗೂ ಪಂಚರನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ಫಿಶ ಮಾರ್ಕೇಟ್ ಸಮೀಪ ಮೊಬೈಲ್‌ ಪೋನ್‌ ಹಿಡಿದುಕೊಂಡು RCB ಮತ್ತು CSK ಎಂದು ಹೇಳಿ PARKER ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್‌ ಮುಖಾಂತರ ಅಕ್ರಮವಾಗಿ ಕ್ರಿಕೇಟ್‌ ಬೆಟ್ಟಿಂಗ್‌ ಆಡುತ್ತಿದ್ದ ಆರೋಪಿತ ಗಂಗಾದರ್.ಎಂ, ಕಿನಾರೆ ಬೀಚ್‌ ರೋಡ್‌, ಕುಂದಾಪುರ ತಾಲೂಕು ಹಾಗೂ ಬೆಟ್ಟಿಂಗ್ ಗೆ ಬಳಸಿದ 2 ಮೊಬೈಲ್ ಪೋನ್ ಹಾಗೂ ನಗದು ರೂಪಾಯಿ 3,750/- ಅನ್ನು ಮಹಜರು ಮುಖೇನಾ ಸ್ವಾದೀನಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 92/2025 ಕಲಂ: 112 BNS & 78 KP Act ನಂತೆ ಪ್ರಕರಣ ದಾಖಲಾಗಿರುತ್ತದೆ.