ಉಡುಪಿ : ಕಲಾಶ್ರೀ ನಾಟ್ಯಾಲಯ ಗೋಳಿಯಂಗಡಿ ಆಯೋಜನೆಯಲ್ಲಿ ಮಹೋನ್ನತ ಸಾಂಸ್ಕೃತಿಕ ಸಂಜೆ ಕಲಾಶ್ರೀ ಸಂಭ್ರಮ 2025, ನವೆಂಬರ್ 15 ರಂದು ನಡೆಯಲಿದೆ.
ಇದೇ ಕಾರ್ಯಕ್ರಮದಲ್ಲಿ ಗಂಡೆದೆಯ ಕಡಲ ವೀರ, ಆಪತ್ಕಾಲದ ಗೆಳೆಯ, ನಿಜಾರ್ಥದ ಸಮಾಜಸೇವಕ, ಈಶ್ವರ ಮಲ್ಪೆಯವರಿಗೆ ಕಲಾಶ್ರೀ ಪುರಸ್ಕಾರ 2025 ನೀಡಿ ಪುರಸ್ಕರಿಸಲಾಗುತ್ತದೆ ಎಂದು ಟೀಮ್ ಕಲಾಶ್ರೀ ನಾಟ್ಯಾಲಯ ಗೋಳಿಯಂಗಡಿ ಪ್ರಕಟಣೆಯಲ್ಲಿ ತಿಳಿಸಿದೆ.



