ಕುಂದಾಪುರ: ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಥ್ರೆಡ್ ನಲ್ಲಿ ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹೆಸರು ಕೆಡಿಸುವ ಯತ್ನ ನಡೆಸಲಾಗುತ್ತಿದೆ ಎಂದು ಯಕ್ಷಗಾನ ಕಲಾವಿದೆ, ಅಧ್ಯಾಪಕಿ ಅಶ್ವಿನಿ ಕೊಂಡದಕುಳಿ ಅವರು ಆರೋಪಿಸಿದ್ದಾರೆ.
ನಕಲಿ ಖಾತೆಗಳಲ್ಲಿ ಅಶ್ಲೀಲ ಚಿತ್ರಗಳನ್ನು, ವಿಷಯಗಳನ್ನು ಹಾಕಲಾಗುತ್ತಿದೆ. ಇದರಿಂದ ನನ್ನ ಹೆಸರು ದುರ್ಬಳಕೆ ಆಗಲಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.