ಕುಂದಾಪುರ: ನಗರಸ ಸಮೀಪ ಕಂದಾವರ ಗ್ರಾಮದ ಯುವಕನೋರ್ವ ವೈಯಕ್ತಿಕ ಸಮಸ್ಯೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ನಿಖೀಲ್ ಕುಮಾರ ಎಂದು ತಿಳಿದು ಬಂದಿದೆ.
ಪ್ರಕರಣ ವಿವರ : ಪಿರ್ಯಾದಿದಾರ ವೆಂಕಟೇಶ (49) ಕಂದಾವರ ಗ್ರಾಮ ಇವರ ಮಗ ನಿಖೀಲ್ ಕುಮಾರ (26) ಎಂಬುವರು ಮೀನು ಗಾಡಿಗೆ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಫಿರ್ಯಾದಿದಾರರು ದಿನಾಂಕ 19.08.2025 ರಂದು ಸ್ವಂತ ಕೆಲಸದ ನಿಮಿತ್ತ ಹೆಂಡತಿ ಹಾಗೂ ಮಗಳೊಂದಿಗೆ ರಾಣೆಬೆನ್ನೂರಿಗೆ ಹೋಗಿದ್ದ ಸಮಯ ನಿಖೀಲ್ ಕುಮಾರ ಪ್ರಾಯ 26 ವರ್ಷರವರು ದಿನಾಂಕ 20.08.2025 ರಂದು ಮದ್ಯಾಹ್ನ 13:00 ಗಂಟೆಯಿಂದ ಸಂಜೆ 19:00 ಗಂಟೆಯ ಮದ್ಯಾವಧಿಯಲ್ಲಿ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಜನತಾ ಕಾಲೋನಿಯ ಅಂಬೇಡ್ಕರ್ ಭವನದ ಬಳಿಯಿರುವ ತನ್ನ ವಾಸದ ಮನೆಯಲ್ಲಿ ತನಗಿದ್ದ ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಪಟ್ಟು ಮನೆಯ ಆರ್ ಸಿಸಿ ಯ ಕಬ್ಬಿಣದ ರಿಂಗಿಗೆ ಶಾಲು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಮೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ಕ್ರಮಾಂಕ: 27/2025 ಕಲಂ:194 BNSS ರಂತೆ ಪ್ರಕರಣ ದಾಖಲಿಸಲಾಗಿ