ಉಡುಪಿ: ಮಲ್ಪೆ ಪಡುಕೆರೆ ಬ್ರಿಡ್ಜ್ ಆರಂಭಿಕ ಸ್ಥಳದ ಬಳಿ ಪ್ರವಾಸಿಗರಿಗೆ ವಿಹಾರ ನಡೆಸುತ್ತಿರುವ “ಕ್ರೂಸ್ ಡೈನ್” ಪ್ರವಾಸಿ ಬೋಟ್ ಕುರಿತು ಉಂಟಾದ ಕೆಲವು ಆತಂಕಗಳ ನಡುವೆ ಬೋಟ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಮುಖಾಂತರ ಅಗತ್ಯ ಅನುಮೋದನೆ ಪಡೆದು ಬೋಟ್ ಕಾರ್ಯಾರಂಭ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರವಾಸಿ ಬೋಟ್‌ನಲ್ಲಿ ಲೈಸೆನ್ಸ್ ಪಡೆದ ನುರಿತ ಚಾಲಕರು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಮಾನ್ಯತೆ ಪಡೆದ ಸಂಸ್ಥೆಯಿಂದ ತರಬೇತಿ ಪಡೆದ ಲೈಫ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. Catamarine ಮಾದರಿಯ ಅತ್ಯಂತ ಸುರಕ್ಷಿತ ಬೋಟನ್ನು ನಿರ್ಮಿಸಿ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಮನೋರಂಜನಾ ವಿಹಾರ ಸೇವೆ ನೀಡಲಾಗುತ್ತಿದೆ.

ಬೋಟ್‌ನಲ್ಲಿ Birthday party, Get-together ಸೇರಿದಂತೆ ವಿವಿಧ ಸಮಾರಂಭಗಳಿಗೆ ವಿಶೇಷ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.
ಪ್ರವಾಸಿ ಬೋಟ್ ಸಂಚಾರದಿಂದ ಮೀನುಗಾರರು ಅಥವಾ ಮೀನುಗಾರಿಕಾ ದೋಣಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಬೋಟ್ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.



