Home Latest ತೆಂಗಿನ ಕಾಯಿ ಬಿದ್ದು ಮೃತಪಟ್ಟ ಮಗು ದಕ್ಷ್ ಮನೆಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ...

ತೆಂಗಿನ ಕಾಯಿ ಬಿದ್ದು ಮೃತಪಟ್ಟ ಮಗು ದಕ್ಷ್ ಮನೆಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಸಾಂತ್ವಾನ

ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹೆರಂಜೆಯಲ್ಲಿ ತೆಂಗಿನ ಕಾಯಿ ಬಿದ್ದು 1.5 ವರ್ಷದ ಮಗು ದಕ್ಷ್ ಮೃತ ಪಟ್ಟ ಹಿನ್ನೆಲೆಯಲ್ಲಿ ಅವರ ಮನೆಗೆ ಶಾಸಕ ಯಶ್ ಪಾಲ್ ಸುವರ್ಣ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

 

ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕರು, ಘಟನೆಯ ಬಗ್ಗೆ ತಕ್ಷಣ ಸರ್ಕಾರಕ್ಕೆ ವರದಿ ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಕಾರದ ಮೂಲಕ ಗರಿಷ್ಠ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

 

ಘಟನೆ ನಡೆದ ಸ್ಥಳಕ್ಕೆ ಸೂಕ್ತ ರಸ್ತೆ ಸಂಪರ್ಕದ ಬಗ್ಗೆ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು ರಸ್ತೆ ಸಂಪರ್ಕ ಜಾಗದ ಮಾಲೀಕರು ರಸ್ತೆಗೆ ಅವಕಾಶ ಕಲ್ಪಿಸಿದಲ್ಲಿ ರಸ್ತೆ ಕಾಮಗಾರಿಗೆ ಆದ್ಯತೆಯ ಮೇರೆಗೆ ಅನುದಾನ ಒದಗಿಸುವ ಭರವಸೆ ನೀಡಿದರು.

 

ಮೃತ ಮಗುವಿನ ತಂದೆ ಪ್ರಶಾಂತ್ ಪೂಜಾರಿ, ತಾಯಿ ಸುಚಿತ್ರ ಹಾಗೂ ಕುಟುಂಬಸ್ಥರಿಗೆ ಸಂತೈಸಿ, ವೈಯುಕ್ತಿಕ ನೆಲೆಯಲ್ಲಿ ಪರಿಹಾರ ಧನ ನೀಡಿದರು.

 

ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಿ. ಎನ್. ಶಂಕರ್ ಪೂಜಾರಿ, ಪಕ್ಷದ ಪ್ರಮುಖರಾದ ಮಹೇಶ್ ಕೋಟ್ಯಾನ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ , ಸುಶಾಂತ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ನಿತ್ಯಾನಂದ ಪೂಜಾರಿ ಚಾಂತಾರು ಗೌತಮ್ ಅಗ್ರಹಾರ, ಮಹೇಂದ್ರ ನೀಲವರ, ಮಿಥುನ್ ಅಮೀನ್, ಗಿರಿಧರ್ ಚಾಂತಾರು,ಸಂತೋಷ ಜತ್ತನ್, ಉದಯ್ ಕಾಮತ್, ದಿನೇಶ್ ಚಾಂತರು, ಪ್ರೇಮಾ ಶೆಟ್ಟಿ, ಅಶೋಕ್ ಹೇರೂರು, ಹೇಮಾ ಅಶೋಕ್, ರಮ್ಯಾ ಉಪ್ಪುರು, ಅಶೋಕ್ ಅಮೀನ್, ಶೋಭಾ ಪೂಜಾರಿ ಹಂದಾಡಿ, ಬೇಬಿ ಚಾಂತಾರು, ರೇವತಿ, ಶೈಲಜಾ ಹೇರೂರು, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೀರಾ, ಗ್ರಾಮ ಆಡಳಿತ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.