ಬೆಳಗಾವಿ: ಎಸ್‌ಡಿಆರ್‌ಎಫ್ ಸಿಪಿಐ ಶ್ರೀಶೈಲ ಚೌಗಲೆ ನೇಣಿಗೆ ಶರಣು ಬೆಳಗಾವಿಯ ಎಸ್‌ಡಿಆರ್‌ಎಫ್ ಸಿಪಿಐ ಶ್ರೀಶೈಲ ಚೌಗಲೆ (37) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಬೆಳಗಾವಿಯ ಚನ್ನಮ್ಮ ನಗರದ ತಮ್ಮ ಮನೆಯಲ್ಲಿ ರೂಮ್ ಬಾಗಿಲು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ
ಪತ್ನಿ ಘಟನೆ ಸಂಬಂಧ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ರೂಮ್ ಬಾಗಿಲು ಮುರಿದು ಆಸ್ಪತ್ರೆಗೆ ರವಾನಿಸಿದ್ದಾರೆ.ಅದಾಗಲೇ ಶ್ರೀಶೈಲ ಅವರು ಮೃತಪಟ್ಟಿದ್ದರು




