Home Latest ಕುಂದಾಪುರ : ಅಂಗಡಿಯಲ್ಲಿ ಅಕ್ರಮ ಅನ್ನ ಭಾಗ್ಯ ಅಕ್ಕಿ‌ ದಾಸ್ತಾನು : ಪೊಲೀಸರಿಂದ ದಾಳಿ…!!

ಕುಂದಾಪುರ : ಅಂಗಡಿಯಲ್ಲಿ ಅಕ್ರಮ ಅನ್ನ ಭಾಗ್ಯ ಅಕ್ಕಿ‌ ದಾಸ್ತಾನು : ಪೊಲೀಸರಿಂದ ದಾಳಿ…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಅಂಗಡಿಯಲ್ಲಿ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವ‌ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಪ್ರಕರಣದ ವಿವರ : ದಿನಾಂಕ 10.10.2025 ರಂದು ಪಿರ್ಯಾದಿದಾರ ಹೆಚ್ ಎಸ್ ಸುರೇಶ (49) ಆಹಾರ ನಿರೀಕ್ಷಕರು ಕುಂದಾಪುರ ಇವರಿಗೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕಂಬಳಗದ್ದೆ ರಸ್ತೆಯಲ್ಲಿರುವ ಶರತ್ ಶೆಟ್ಟಿ ಎಂಬುವರ ಅಕ್ಕಿ ಗಿರಣಿಯಲ್ಲಿ ಸರ್ಕಾರದಿಂದ ನೀಡಲಾದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ಭಾತ್ಮೀದಾರರಿಂದ ಮಾಹಿತಿ ಬಂದಂತೆ ದಾಳಿ ನಡೆಸಿದ್ದು ಶರತ್‌ ಶೆಟ್ಟಿ ಮತ್ತು ಸಲಾಂ @ ಪಕೀರ್‌ ಬ್ಯಾರಿ ಎಂಬವರು ಯಾರಿಂದಲೋ ಖರೀದಿಸಿಕೊಂಡು ಬಂದು ಶರತ್‌ ಶೆಟ್ಟಿ ಎಂಬವರ ಮಾಲಿಕತ್ವದ ಅಕ್ಕಿ ಗಿರಣಿಯಲ್ಲಿ 22 ಕ್ವಿಂಟಾಲ್ ಕೊಚ್ಚಿಗೆ ಅಕ್ಕಿ ಹಾಗೂ 5 ಕ್ವಿಂಟಾಲ್ ಬೆಳ್ತಿಗಿ ಅಕ್ಕಿ ಒಟ್ಟು 62,100 ರೂ ಮೌಲ್ಯದ 27 ಕ್ವಿಂಟಾಲ್‌ ಅಕ್ಕಿಯನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 64/2025 ಕಲಂ 3, 6, 7 Essential Commodities Act 1955,ರಂತೆ ಪ್ರಕರಣ ದಾಖಲಾಗಿರುತ್ತದೆ.