ಬ್ರಹ್ಮಾವರ: ಉಡುಪಿಯ ನೀಲಾವರದಲ್ಲಿ ದಿನಾಂಕ 31-5-2026 ರಂದು “ರಾಮಕ್ಷತ್ರಿಯ ಜ್ಞಾನ- ಶಕ್ತಿ- ಅರ್ಥ ಸಮಾಗಮ” ಶೀರ್ಷಿಕೆಯ ಬೃಹತ್ ರಾಮಕ್ಷತ್ರಿಯ ಸಮಾಜದ ಸಮ್ಮೇಳನ ಜರುಗಿತು.
ಈ ಕಾರ್ಯಕ್ರಮದ ಪ್ರಮುಖ ಅಂಗವಾಗಿ “ರಾಜ್ಯಲಕ್ಷ್ಮಿ ವಿಜಯೋತ್ಸವ”, “ಕ್ಷತ್ರಿಯ ಹನುಮ ಧ್ವಜ” ಅನಾವರಣ ಹಾಗೂ “ಆರ್. ಕೆ. ಸಾಮ್ರಾಟ್” ರಾಮಕ್ಷತ್ರಿಯ ಡಿಜಿಟಲ್ ಸುದ್ದಿ ಮಾಧ್ಯಮ (E-Channel) ಲೋಕಾರ್ಪಣೆ ಮಾಡಲಾಯಿತು, ಹಾಗೂ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ, ರಾಜಕೀಯ ನೇತಾರರುಗಳಿಗೆ, ರಕ್ಷಣಾ ಇಲಾಖೆಯವರಿಗೆ (ಪೊಲೀಸ್ ಮತ್ತು ಮಿಲಿಟರಿ), ಉದ್ಯಮಿಗಳಿಗೆ, ಹಾಗೂ ಆರ್ಥಿಕ ಸಂಸ್ಥೆಯ ಅಧಿಕಾರಿಗಳಿಗೆ ಗೌರವ ನೀಡಲಾಯಿತು.
ಈ ವಿಶೇಷ ಸಂದರ್ಭದಲ್ಲಿ ನಾಡೋಜ ಡಾ| ಕೃಷ್ಣ ಪ್ರಸಾದ್ ಕೂಡ್ಲ, ವೈದ್ಯಕೀಯ ನಿರ್ದೇಶಕರು – ಪ್ರಸಾದ್ ನೇತ್ರಾಲಯ ಸೂಪರ್‌ಸ್ಪೆಷಾಲಿ ಗ್ರೂಪ್ ಆಫ್ ಕಣ್ಣಿನ ಆಸ್ಪತ್ರೆ ಉಡುಪಿ ಮತ್ತು ಡಾ |ರಶ್ಮಿ ಕೃಷ್ಣ ಪ್ರಸಾದ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು – ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್.
ದಂಪತಿಗಳಿಗೆ ಅವರ ಜ್ಞಾನ, ಸಾಮರ್ಥ್ಯ ಮತ್ತು ದೇಶ-ವಿದೇಶಗಳಲ್ಲಿ ಆಗಿಸಿದ ಅಭೂತಪೂರ್ವ ಸಾಧನೆಗಳನ್ನು ಶ್ಲಾಘಿಸಿ, ಕ್ಷತ್ರಿಯ ಸಮಾಜದ ಶ್ರೇಷ್ಠ “ರಾಮಕ್ಷತ್ರಿಯ ರತ್ನ ಪ್ರಶಸ್ತಿ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಮಾಗಮ ಕಾರ್ಯಕ್ರಮವನ್ನು ರಾಮಕ್ಷತ್ರಿಯ ಯುವ ಸಂಘ – ನೀಲಾವರ ಘಟಕ ಯೋಜಿಸಿದ್ದ, ರಾಮಕ್ಷತ್ರಿಯ ಸಂಘ (ರಿ.), ಉಡುಪಿ, ರಾಮಕ್ಷತ್ರಿಯ ಯುವ ಸಂಘ, ಉಡುಪಿ, ರಾಮಕ್ಷತ್ರಿಯ ಮಹಿಳಾ ಸಂಘ, ಉಡುಪಿ ರಾಮಕ್ಷತ್ರಿಯ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ವಿಶ್ವ ರಾಮಕ್ಷತ್ರಿಯ ಮಹಾ ಸಂಘ (ರಿ.), ಅಖಿಲ ಕರ್ನಾಟಕ ಕೋಟೆಗಾರ್ ಸಂಘ (ರಿ.) ರಾಮಕ್ಷತ್ರಿಯ ಕೋಟೆಗಾರ್ ಫೆಡರೇಷನ್, ರಾಮಕ್ಷತ್ರಿಯ ಸಂಘ (ರಿ.), ಕುಂದಾಪುರ
ಅಧ್ಯಕ್ಷರು ರಾಮಕ್ಷತ್ರಿಯ ಸಂಘ, ಉಪ್ಪಿನಕುದ್ರು, ರಾಮಕ್ಷತ್ರಿಯ ಸಂಘ (ರಿ.), ಹೆಬ್ರಿ ರಾಮಕ್ಷತ್ರಿಯ ಸಂಘ (ರಿ.), ಕಾರ್ಕಳ, ರಾಮಕ್ಷತ್ರಿಯ ಯುವ ಸಂಘ, ಸಾಂತ್ಯಾರು ಘಟಕ
ರಾಮಕ್ಷತ್ರಿಯ ಯುವ ಸಂಘ, ಉಡುಪಿ ನಗರ ಘಟಕ
ರಾಮಕ್ಷತ್ರಿಯ ಯುವ ಸಂಘ, ಸಾಸ್ತಾನ ಘಟಕ, ರಾಮಕ್ಷತ್ರಿಯ ಯುವ ಸಂಘ, ಕಾಪು ಘಟಕ ಹಾಗೂ ಇತರೆ ಕ್ಷತ್ರಿಯ ಸಂಘಗಳು ಬೆಂಬಲ ನೀಡಿ ಪಾಲ್ಗೊಂಡಿದ್ದರು.




