Home Kundapura News ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸ್ಮೃತಿ ಸಂಭ್ರಮ’ : 20 ವರ್ಷಗಳ ಬಳಿಕ ಹಳೆ...

ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಸ್ಮೃತಿ ಸಂಭ್ರಮ’ : 20 ವರ್ಷಗಳ ಬಳಿಕ ಹಳೆ ವಿದ್ಯಾರ್ಥಿಗಳ ಭಾವನಾತ್ಮಕ ಸಂಗಮ…!!

ಬೈಂದೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು 2005–2006ನೇ ಸಾಲಿನ ಹಳೆ ವಿದ್ಯಾರ್ಥಿಗಳ “ಸ್ಮೃತಿ ಸಂಭ್ರಮ” ಎಂಬ 20 ವರ್ಷಗಳ ಸವಿ ನೆನಪಿನ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ನಡೆಯಿತು.

ಡಾ.ರವಿರಾಜ್ ಶೆಟ್ಟಿ ಮತ್ತು ಪ್ರಾಧ್ಯಾಪಕ ವೃಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಇಂತಹ ಕಾರ್ಯಕ್ರಮಗಳು ಸ್ನೇಹ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ , 20 ವರ್ಷಗಳ ಬಳಿಕ ಈ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಒಂದಾಗಿ ಕಾಲೇಜಿನೊಂದಿಗೆ ಬಾಂಧವ್ಯ ಉಳಿಸಿಕೊಂಡಿರುವುದು ಶ್ಲಾಘನೀಯ, ಎಂದರು.

ಸಂಸ್ಥೆಯ ಹಳೆ ವಿದ್ಯಾರ್ಥಿ ಅಜಿತ್ ಎ ಬಿಜೂರು ಅವರು ಮಾತನಾಡಿ 20 ವರ್ಷಗಳ ಬಳಿಕ ನಾವೆಲ್ಲರೂ ಒಂದೇ ವೇದಿಕೆಯಲ್ಲಿ ಒಟ್ಟಾಗಿರುವುದು ಅವಿಸ್ಮರಣೀಯ ಕ್ಷಣವಾಗಿದೆ. ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿದೆ . ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲಾ ಸ್ನೇಹಿತರು ಹಾಗೂ ಪ್ರಾಧ್ಯಾಪಕ ವೃಂದದವರಿಗೆ ಕೃತಜ್ಞತೆ ಸಲ್ಲಿಸಿದರ , ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು.

ಹಳೆ ವಿದ್ಯಾರ್ಥಿ ಅನುಪಮ ಪ್ರಭು ಮಾತನಾಡಿ , ಹಲವು ವರ್ಷಗಳ ಬಳಿಕ ಸ್ನೇಹಿತರು ಹಾಗೂ ಗುರುಗಳನ್ನು ಮತ್ತೆ ಭೇಟಿಯಾದುದು ಮನಸಿಗೆ ಅಪಾರ ಸಂತೋಷ ತಂದಿದೆ ಇಂತಹ ಸವಿ ನೆನಪುಗಳ ಕಾರ್ಯಕ್ರಮಗಳು ಹಳೆಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ ಜೀವನಪೂರ್ತಿ ಮರೆಯಲಾಗದ ಅವಿಸ್ಮರಣೀಯ ಸಂತೋಷದ ಕ್ಷಣಗಳನ್ನು ನೀಡುತ್ತವೆ ಎಂದರು .

ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಹಳೆ ವಿದ್ಯಾರ್ಥಿಗಳು ಗೌರವಪೂರ್ವಕವಾಗಿ ಗುರುವಂದನೆ ಸಮರ್ಪಿಸಿದರು. ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ನೀಡಿದ ಪ್ರಾಚಾರ್ಯರುಗಳಿಗೆ ಸೇವೆಯನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಈ ಕ್ಷಣವು ಭಾವನಾತ್ಮಕ ಹಾಗೂ ಸ್ಮರಣೀಯವಾಗಿದೆ

ಹಳೆ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಎಲ್ಲರೂ ಉತ್ಸಾಹದಿಂದ ಭಾಗವಹಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು

ಡಾ.ರಾಜೇಂದ್ರ ಎಸ್ ನಾಯಕ್ , ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ ರಾಮರಾಯರ ಆಚಾರ್ , ದಾಮೋದರ್ ಗೌಡ , ಡಾ.ಉದಯ್ ಕುಮಾರ್ ಶೆಟ್ಟಿ ಡಾ.ಸೋಮಶೇಖರ್ ,ಪ್ರಸನ್ನ ಕುಮಾರ್, ಡಾ.ಗುಲಾಬಿ ಪೂಜಾರಿ , ಪಾಡುರಂಗ , ಕಮಲಾ ಹಾಗೂ ಕೃಷ್ಣ ಗೊಂಡ ಸಂಸ್ಥೆಯ ಪ್ರಸ್ತುತ ಪ್ರಾಧ್ಯಾಪಕರುಗಳಾದ ಡಾ.ಆನಂದ. ಸಿ , ಮಮತಾ ಪೂಜಾರಿ , ಮಣಿಕಂಠ ,CDMC ಉಪಾಧ್ಯಕ್ಷರಾದ ಮುತ್ತಯ್ಯ ಪೂಜಾರಿ ಹಾಗೂ ಹಳೆ ವಿದ್ಯಾರ್ಥಿ ಉಪಸ್ಥಿತರಿದ್ದರು.

ಅಜಿತ್ ಎ ಬಿಜೂರ್ ಸ್ವಾಗತಿಸಿದರು.ಗುರುಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಚಿತ್ರಣವನ್ನು ನೀಡಿದರು
ಮಾರುತಿ ಕಾರ್ಯಕ್ರಮವನ್ನು ನಿರೂಪಿಸಿದರು
ರಾಮ ಮೊಗವೀರ ವಂದಿಸಿದರು.