Home Crime ಕುಕ್ಕುಂದೂರು ಗ್ರಾಮದಲ್ಲಿ ಅಕ್ರಮ ಸ್ಪೋಟಕ ಬಳಕೆ, ಇಬ್ಬರ ಬಂಧನ..!!

ಕುಕ್ಕುಂದೂರು ಗ್ರಾಮದಲ್ಲಿ ಅಕ್ರಮ ಸ್ಪೋಟಕ ಬಳಕೆ, ಇಬ್ಬರ ಬಂಧನ..!!

{"remix_data":[],"remix_entry_point":"challenges","source_tags":[],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಪ್ರದೇಶದಲ್ಲಿ ಅಕ್ರಮ ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಒಡೆದ ಪ್ರಕರಣ ಬೆಳಕಿಗೆ ಬಂದಿದೆ.

ದಿನಾಂಕ 21 ಜನವರಿ 2026ರಂದು ಸಂಜೆ ಸುಮಾರು 5 ಗಂಟೆ ವೇಳೆಗೆ ಯಾವುದೇ ಪರವಾನಿಗೆ ಇಲ್ಲದೆ ಸ್ಪೋಟಕಗಳನ್ನು ಬಳಸಿದ್ದ ಆರೋಪದ ಮೇಲೆ ರವಿಚಂದ್ರ ಮತ್ತು ಪವನ್ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ Explosive Act 1884ರ ಕಲಂ 9(B)1(b), Explosive Substances Act 1908ರ ಕಲಂ 5, IPC ಕಲಂ 287 ಹಾಗೂ BNS 2023ರ ಕಲಂ 3(5)ರಂತೆ ಅಪರಾಧ ಕ್ರಮಾಂಕ 13/2026 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆ ನಡೆಸಿದ ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಆರೋಪಿತರಾದ ಟಿ. ರವಿಚಂದ್ರ, ವಯಸ್ಸು 55, ಹಾಗೂ ಅವರ ಪುತ್ರ ಪವನ್ ಕುಮಾರ್, ವಯಸ್ಸು 31, ಇಬ್ಬರನ್ನೂ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಾನ್ಯ ನ್ಯಾಯಾಲಯವು ಆರೋಪಿತರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.