Home Karkala News ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಒಂಟಿ ಮಹಿಳೆಯ ರಕ್ಷಣೆ

ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಒಂಟಿ ಮಹಿಳೆಯ ರಕ್ಷಣೆ

ಉಡುಪಿ : ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡು ರಸ್ತೆ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಒಂಟಿ ಮಹಿಳೆಯ ರಕ್ಷಸಿರುವ ಘಟನೆ ನಡೆದಿದೆ.

 

ಜೋಡು ರಸ್ತೆ ಎಂಬಲ್ಲಿ ಮಹಿಳೆಯೊಬ್ಬರು ಬಸ್ ಸ್ಟಾಪ್ ನಲ್ಲಿ ತುಂಬಾ ಸಮಯದಿಂದ ಒಂಟಿಯಾಗಿ ಕುಳಿತಿರುವ ಬಗ್ಗೆ 112 ಸಹಾಯವಾಣಿಗೆ ರಾತ್ರಿ 07 ಗಂಟೆ ಸುಮಾರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ

112 ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಮಹಿಳೆಯು ತಾನು ಮುಂಬೈನ ಮಾಲ್ವನ್ ನಿಂದ ಬಂದಿರುವುದಾಗಿ ತಿಳಿಸಿದ್ದು ಮೇಲ್ನೋಟಕ್ಕೆ ಮಾನಸಿಕವಾಗಿ ವಿಚಲಿತರಾಗಿರುವಂತೆ ಕಾಣಿಸಿರುತ್ತಾರೆ.

 

ಕೂಡಲೇ ಕಾರ್ಕಳ ನಗರ ಠಾಣಾ ಪಿಎಸ್ಐ ರವರಿಗೆ ಮಾಹಿತಿ ನೀಡಿ ಅವರ ಸೂಚನೆಯಂತೆ ಕಾರ್ಕಳ ಜರಿಗುಡ್ಡೆಯ ಸುರಕ್ಷಾ ಆಶ್ರಮಕ್ಕೆ ಮಹಿಳೆಯನ್ನು ಸುರಕ್ಷಿತವಾಗಿ ತಲುಪಿಸಿರುತ್ತಾರೆ.