Home Crime ಪಕ್ಕದ ಊರಿಗೆ ಪೂಜೆಗಾಗಿ ತೆರಳಿದ್ದ ಅರ್ಚಕರೊಬ್ಬರು ಶವವಾಗಿ ಪತ್ತೆ : ಕೊಲೆ ಶಂಕೆ…!!

ಪಕ್ಕದ ಊರಿಗೆ ಪೂಜೆಗಾಗಿ ತೆರಳಿದ್ದ ಅರ್ಚಕರೊಬ್ಬರು ಶವವಾಗಿ ಪತ್ತೆ : ಕೊಲೆ ಶಂಕೆ…!!

ಮಂಡ್ಯ: ಪಕ್ಕದ ಊರಿಗೆ ಪೂಜೆಗಾಗಿ ತೆರಳಿದ್ದ ಅರ್ಚಕರೊಬ್ಬರು ನಾಲೆಯಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ಸಂಭವಿಸಿದೆ.

ಸಾವನ್ನಪ್ಪಿದ ವ್ಯಕ್ತಿ ಸಿದ್ದಲಿಂಗಪ್ಪ (46) ಎಂದು ತಿಳಿದು ಬಂದಿದೆ. ಇವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ವೃತ್ತಿಯಲ್ಲಿ ಅರ್ಚಕರಾಗಿದ್ದ ಸಿದ್ದಲಿಂಗಪ್ಪ ಅವರು ಸದಾ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದವರು. ಮಾರ್ಚ್ 08ರಂದು ತಮ್ಮ ಮನೆಯಲ್ಲಿ “ಪಕ್ಕದ ಶೆಟ್ಟಿಹಳ್ಳಿ ಗ್ರಾಮಕ್ಕೆ ಪೂಜೆ ಮಾಡಲು ಹೋಗುತ್ತಿದ್ದೇನೆ” ಎಂದು ಹೇಳಿ ಸ್ಕೂಟರ್‌ನಲ್ಲಿ ಹೊರಟಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದರು.

ಸಿಡಿಎಸ್ (CDS) ನಾಲೆಯಲ್ಲಿ ಸ್ಕೂಟರ್‌ವೊಂದು ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಗ್ರಾಮಸ್ಥರು ನಾಲೆ ಬಳಿ ಹುಡುಕಾಟ ನಡೆಸಿದಾಗ, ಸಿದ್ದಲಿಂಗಪ್ಪ ಅವರ ಮೃತದೇಹ ಮೈಮೇಲೆ ಬಟ್ಟೆಯಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಘಟನೆ ಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.