Home Crime ಶಿರ್ವಾ : ಹೋಟೆಲ್ ಸಿಬ್ಬಂದಿ ನಾಪತ್ತೆ : ಪ್ರಕರಣ ದಾಖಲು…!!

ಶಿರ್ವಾ : ಹೋಟೆಲ್ ಸಿಬ್ಬಂದಿ ನಾಪತ್ತೆ : ಪ್ರಕರಣ ದಾಖಲು…!!

ಶಿರ್ವಾ: ಉಡುಪಿ ಜಿಲ್ಲೆಯ ಶಿರ್ವಾ ಪೇಟೆಯಲ್ಲಿರುವ ಶ್ರೀ ಗಣೇಶ್ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಪ್ರವೀಣ ಪೂಜಾರಿ (45) ಅವರು ನಾಪತ್ತೆಯಾಗಿರುವ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರಾದ ಪ್ರಭಾಕರ ಪೂಜಾರಿ ಅವರ ಮಾಹಿತಿ ಪ್ರಕಾರ, ಜುಲೈ 16ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಪ್ರವೀಣ ಪೂಜಾರಿ ಹೋಟೆಲ್‌ನಿಂದ ಹೊರಗೆ ತೆರಳಿದ್ದು, ಬಳಿಕ ಕೆಲಸದ ಸ್ಥಳಕ್ಕೂ ಬಂದಿಲ್ಲ. ಅಲ್ಲದೆ, ಮನೆಗೂ ಅಥವಾ ಪತ್ನಿಯ ಮನೆ ಇರುವ ನಿಟ್ಟೆಗೂ ಹೋಗಿಲ್ಲ ಎಂದು ತಿಳಿದುಬಂದಿದೆ.

ಬಂಧು-ಬಳಗ ಹಾಗೂ ಪರಿಚಯಸ್ಥರ ಬಳಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.

ಈ ಹಿನ್ನೆಲೆಯಲ್ಲಿ ಶಿರ್ವಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಯಾರಿಗಾದರೂ ಪ್ರವೀಣ ಪೂಜಾರಿ ಅವರ ಬಗ್ಗೆ ಮಾಹಿತಿ ದೊರೆತಲ್ಲಿ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.