ಗಂಗೊಳ್ಳಿ: ಉಡುಪಿಯ ಶ್ಯಾಮಿಲಿ ಸಭಾಗೃಹದಲ್ಲಿ ಸಾಮೂಹಿಕ ಮದುವೆಯಾದ ವ್ಯಕ್ತಿಯೋರ್ವ ನಂತರ ಹೆಂಡತಿಗೆ ಮನೆಯವರ ಜೊತೆ ಸೇರಿ ವರದಕ್ಷಿಣೆ ಕಿರುಕುಳ ನೀಡಿದ ಘಟನೆ ಸಂಭವಿಸಿದೆ.
ವರದಕ್ಷಿಣೆ ಕಿರುಕುಳ ನೀಡಿದವರು ಸಂತೋಷ, ಶೋಭಾ, ಸಂಗೀತಾ ಎಂದು ತಿಳಿದು ಬಂದಿದೆ.
ಗಂಗೊಳ್ಳಿ ನಿವಾಸಿ ದೀಪಿಕಾ ಎಂಬವರು ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ವಿವರ : ಫಿರ್ಯಾದಿ ಶ್ರೀಮತಿ ದೀಪಿಕಾ (30) ಗಂಗೊಳ್ಳಿ ಗ್ರಾಮ, ಕುಂದಾಪುರ ಇವರು ದಿನಾಂಕ:28/04/2016 ರಂದು ಉಡುಪಿಯ ಶ್ಯಾಮಿಲಿ ಸಭಾಗೃಹದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 1 ನೇ ಆರೋಪಿತ ಸಂತೋಷ ನ ಜೊತೆ ವಿವಾಹವಾಗಿ, ತನ್ನ ಗಂಡನ ಮನೆಯಾದ ಬ್ರಹ್ಮಾವರ ತಾಲೂಕು ಸಾಲಿಗ್ರಾಮ, ಪಡುಕೆರೆಯ ಪಾರಂಪಳ್ಳಿ ಎಂಬಲ್ಲಿ ವೈವಾಹಿಕ ಜೀವನ ನಡೆಸಿಕೊಂಡಿದ್ದು, ವಿವಾಹದ ನಂತರ ಆರೋಪಿತ 1) ಸಂತೋಷ 2)ಶ್ರೀಮತಿ ಶೋಭಾ 3)ಶ್ರೀಮತಿ ಸಂಗೀತಾ ಇವರು ಫಿರ್ಯಾದುದಾರರು ತವರಿನಿಂದ ಚಿನ್ನ ಮತ್ತು ಹಣವನ್ನು ವರದಕ್ಷಿಣೆಯಾಗಿ ತಂದಿಲ್ಲವೆಂದು ಮೂದಲಿಸಿ ಮಾನಸಿಕ ಹಿಂಸೆ ನೀಡಿ, ಬೈದು ಅವಮಾನಿಸಿ, ಕೈಯಿಂದ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2025 ಕಲಂ: 85, 115(2), 352, 351 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.