ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ಶರಾಬು ಕುಡಿಯುವ ಅಭ್ಯಾಸ ಹೊಂದಿದ್ದ ಯುವಕನೊಬ್ಬ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವಕ ಕೋಟೆಮಕ್ಕಿ ಹೊಸಾಡು ಗ್ರಾಮದ ರಜತ್ ಎಂದು ತಿಳಿದು ಬಂದಿದೆ.
ಪ್ರಜರಣ ವಿವರ : ಪಿರ್ಯಾದಿದಾರ ರಾಘವೇಂದ್ರ (35) ಅಂಬಾ ನಿಲಯ ಕೋಟೆಮಕ್ಕಿ ಹೊಸಾಡು ಗ್ರಾಮ ಇವರ ತಮ್ಮ ರಜತ್ (28) ರವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು ಶರಾಬು ಕುಡಿಯುವ ಅಭ್ಯಾಸವನ್ನು ಹೊಂದಿದ್ದು ದುಡಿದ ಹಣ ಸಾಕಾಗದೇ ಸಂಘದಲ್ಲಿ ಸಾಲ ಮಾಡಿಕೊಂಡಿದ್ದು ಅದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 31.07.2025 ರಂದು ಸಂಜೆ ಸಮಯ ಸುಮಾರು 6:00 ಗಂಟೆಗೆ ಸರಾಯಿ ಜೊತೆಯಲ್ಲಿ ಇಲಿ ಪಾಷಾಣವನ್ನು ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ದಿನಾಂಕ 05.08.2025 ರಂದು ರಾತ್ರಿ 7:42 ಗಂಟೆಗೆ ಮೃತಪಟ್ಟಿರುತ್ತಾರೆ.
ಈ ಬಗ್ಗೆ ಗಂಗೊಳ್ಳಿ ಠಾಣಾ ಯುಡಿಆರ್ ಕ್ರಮಾಂಕ 20/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.