ಉಡುಪಿ: ನಗರದ ಸಮೀಪ ವ್ಯಕ್ತಿಯೋರ್ವರು ಮನೆಯಿಂದ ಹೊರಟು ಹೋದವರು ವಾಪಸು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ರೋಹನ್ ಕುಮಾರ್ ಶೆಟ್ಟಿಯಾನ್ ಎಂದು ಗುರುತಿಸಲಾಗಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದುದಾರ ನವೀನ್ ಶೆಟ್ಟಿಯಾನ್ (76) “ಬಿ” ಬ್ಲಾಕ್ ಸಿಟಿ ಗೇಟ್ ವೇ ಅಪಾರ್ಟಮೆಂಟ್ ಮಿಷನ್ ಅಸ್ಪತ್ರೆ ಹತ್ತಿರ, ಶಾಂತಿನಗರ ಇವರ ಮಗ ರೋಹನ್ ಕುಮಾರ್ ಶೆಟ್ಟಿಯಾನ್ (45) ರವರು ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಶಾಂತಿನಗರ ಜಂಕ್ಷನ್ ಬಳಿಯಿರುವ ಸಿಟಿ ಗೇಟ್ ವೇ ಅಪಾರ್ಟಮೆಂಟ್ ನ ಬಿ ಬ್ಲಾಕ್ ನ ಫ್ಲಾಟ್ ನಂಬ್ರ 501 ರಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ : 06/09/2025 ರಂದು ಮಧ್ಯಾಹ್ನ 3:00 ಗಂಟೆಗೆ ಫಿರ್ಯಾದುದಾರರು ಮನೆಯಲ್ಲಿರುವಾಗ ರೋಹನ್ ಕುಮಾರ್ ಶೆಟ್ಟಿಯಾನ್ ರವರು ಫಿರ್ಯಾದುದಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಮನೆಯಿಂದ ಹೊರಟು ಹೋದವರು ರಾತ್ರಿ 10:00 ಗಂಟೆ ಅದರೂ ಮನೆಗೆ ಬಾರದೇ ಇದ್ದು, ಫಿರ್ಯಾದುದಾರರು ರೋಹನ್ ಕುಮಾರ ರವರ ಮೊಬೈಲ್ ನಂಬ್ರ 8105996264 ಗೆ ಕರೆಮಾಡಿದಾಗ ನಂಬರ್ ಸ್ವಿಚ್ ಆಫ್ ಬರುತ್ತಿದ್ದು, ನಂತರ ರೋಹನ್ ಕುಮಾರ್ ರವರ ಬಗ್ಗೆ ಅತನ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಈವರೆಗೂ ಪತ್ತೆಯಾಗದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 167/2025, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.