Home Crime ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ…!!

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ…!!

ಕಾರ್ಕಳ: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮುಡಾರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹರೀಶ್ ದೇವಾಡಿಗ (42) ಎಂದು ಗುರುತಿಸಲಾಗಿದೆ. ಅವರ ಸಹೋದರ ನವೀನ್ ದೇವಾಡಿಗ (31) ಅವರು ನೀಡಿದ ಮಾಹಿತಿಯಂತೆ, ಹರೀಶ್ ದೇವಾಡಿಗ ಅವರು ಮದ್ಯಪಾನದ ಅಭ್ಯಾಸದಿಂದ ಜೀವನದಲ್ಲಿ ಬೇಸರಗೊಂಡಿದ್ದು, ಜೂನ್ 3ರಂದು ರಾತ್ರಿ 8ರಿಂದ 9 ಗಂಟೆಯ ಅವಧಿಯಲ್ಲಿ ಮನೆಯ ಜಗಲಿಯಲ್ಲಿದ್ದ ಮಾಡಿನ ಪಕ್ಕಾಸಿಗೆ ಲುಂಗಿ ಕಟ್ಟಿ ಅದರ ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.