ಬಂಟ್ವಾಳ : ಬೋಳ್ಪಾಡಿಯಲ್ಲಿ ಇತ್ತೀಚೆಗೆ ನಡೆದ ಮನೆಯಿಂದ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಬಾಳ್ತಿಲ ನಿವಾಸಿ ಪೃಥ್ವಿ (18) ಹಾಗೂ ಮಂಗಳೂರಿನ ಸುರತ್ಕಲ್ ನಿವಾಸಿ ಕಿಶಾನ್ (22) ಬಂಧಿತ ಆರೋಪಿಗಳು.
ಬಾಳ್ತಿಲ ಗ್ರಾಮದ ರೋಹಿಣಿ ಅವರ ಮನೆಯಲ್ಲಿ ಜೂ.1ರ ಮುಂಜಾನೆ ಕಳ್ಳತನ ನಡೆದಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಸಮೀಪದ ಮನೆಯ ಹತ್ತಿರದ ಸಂಬಂಧಿಯಾಗಿದ್ದ ಪೃಥ್ವಿ ಅವರ ಬಗ್ಗೆ ಅನುಮಾನಗಳು ವ್ಯಕ್ತವಾಗಿ ತನಿಖೆ ನಡೆಸಿದಾಗ ಪ್ರಕರಣ ಬಹಿರಂಗವಾಗಿದೆ. ಆ ಮನೆಯ ಎಲ್ಲ ವಿವರ ಗೊತ್ತಿದ್ದ ಆಕೆ ಗೆಳೆಯನ ಸಹಕಾರದಿಂದ ಚಿನ್ನಾಭರಣ ದೋಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ 21 ಗ್ರಾಂ ಚಿನ್ನಾಭರಣ ಹಾಗೂ 600 `ರೂ. ನಗದು ವಶಪಡಿಸಲಾಗಿದೆ.




