Home Crime ಉಡುಪಿ : ಯುವಕನೋರ್ವ ನಾಪತ್ತೆ…!!

ಉಡುಪಿ : ಯುವಕನೋರ್ವ ನಾಪತ್ತೆ…!!

ಉಡುಪಿ: ನಗರದ ಸಮೀಪ ಅಂಬಲಪಾಡಿ ಎಂಬಲ್ಲಿನ ಯುವಕನೋರ್ವ‌ ಬೈಕ್ ಬಿಟ್ಟು ನಾಪತ್ತೆಯಾದ ಘಟನೆ ‌ನಡೆದಿದೆ.

ನಾಪತ್ತೆಯಾದ ಯುವಕ ಶಿವಪ್ರಸಾದ್ ಎಂದು ತಿಳಿಯಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ಗ್ರೇಪ್‌ ಕ್ರಾಸ್ತ್‌, ಶಿವಪುರ ಹೆಬ್ರಿ ಇವರ ಮಾವನ ಮಗ ಶ್ರಿವಪ್ರಸಾದ (27) ಇವರು ತನ್ನ ಅಕ್ಕನ ಮನೆಯಾದ ಉಡುಪಿ ಅಂಬಲಪಾಡಿಯ ಮಾಂಡವಿ ಟವರ್‌ನಲ್ಲಿ ವಾಸವಾಗಿದ್ದು ಆಡಿಟಿಂಗ್‌ ಕೆಲಸ ಮಾಡಿಕೊಂಡಿದ್ದು, ದಿನಾಂಕ 19/07/2026 ಮಧ್ಯಾಹ್ನ 11:00 ಗಂಟೆಗೆ ಹೆಬ್ರಿ ಕಡೆಗೆ ಹೋಗಿದ್ದು ನಂತರ ಸಂಜೆ 6:00 ಗಂಟೆಗೆ ಅಕ್ಕ ಆಶಾ ಕರೆ ಮಾಡಿದಾಗ ತಾನು ಮಲ್ಪೆ ಬೀಚ್‌ ನಲ್ಲಿ ಇರುವುದಾಗಿ ತಿಳಿಸಿರುತ್ತಾರೆ. ರಾತ್ರಿ 11:00 ಗಂಟೆಗೆ ವಾಪಾಸು ಬರದಿದ್ದನ್ನು ಕಂಡು ಆತನ ಇರುವಿಕೆಯ ಬಗ್ಗೆ ಎಲ್ಲಾ ಕಡೆ ಹುಡುಕಾಡಲಾಗಿ ಬ್ರಹ್ಮಾವರದ ಬಾರ್ಕೂರು ಸೇತುವೆಯ ಬಳಿ ಆತನ ಬೈಕ್‌ ಪತ್ತೆಯಾಗಿದ್ದು ಪತ್ತೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2026 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.