ಮಂಗಳೂರು : ನಗರ ಪೊಲೀಸ್ ಕಮಿಷನರೆಟ್‌ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಲಾಗಿದೆ.
ಸುರತ್ಕಲ್ ಠಾಣೆ ವ್ಯಾಪ್ತಿಯ ಕಾನ ಜಂಕ್ಷನ್ ಬಳಿ ಅಕ್ಷಯ್ ಪುರುಷೋತ್ತಮ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಬಳಿಕ ಮಾದಕ ವಸ್ತು ಸೇವನೆ ಮಾಡಿದ್ದ ಕಾವೂರು ಪಳನೀರು ನಿವಾಸಿ ಸಾನ್ವಿತ್ ಕೆ. (19) ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಡಿಕಲ್ ಬಸ್ ಸ್ಟಾಪ್ ಬಳಿ ಮಾದಕವಸ್ತು ಬೆರೆಸಿದ್ದ ಸಿಗರೇಟು ಸೇವನೆ ಮಾಡಿದ್ದ ಕೋಡಿಕಲ್ ಶೇಡಿಗುರಿ ನಿವಾಸಿ ತುಶಾಂತ್ ಕಾಂತ್ (32) ಮತ್ತು ಅಮ್ಮುಂಜೆ ನಿವಾಸಿ ಕೃತೇಶ್ (22) ಎಂಬಿಬ್ಬರನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಡೀಲ್ ಕೊಡಕ್ಕಲ್ ಬಳಿ ಅರ್ಕುಳ ಮೇರ್ಲಪದವು ನಿವಾಸಿ ದೀಪೇಶ್ (25) ಮತ್ತು ಕಂಕನಾಡಿ ವೆಲೆನ್ಸಿಯಾದ ಮೊಹಿತ್ (25)
ಎಂಬಿಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುತ್ತಾರು ಜಂಕ್ಷನ್ ಬಳಿ ಮಾದಕ ವಸ್ತು ಸೇವಿಸಿದ್ದ ಉಳ್ಳಾಲ ಕಡಪರ ಸುಭಾಷ್ ನಗರ ನಿವಾಸಿ ಅಬ್ದುಲ್ ಸಮೀರ್(35) ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.




