ಗಂಗೊಳ್ಳಿ: ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕು ಗಂಗೊಳ್ಳಿ ಸಮೀಪ ಬೈಕೊಂದು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಬೈಕ್ ಸವಾರ ಲಕ್ಷ್ಮಣ ಎಂದು ತಿಳಿದು ಬಂದಿದೆ.
ಗಂಗೊಳ್ಳಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ದಿನಾಂಕ 01.07.2025 ರಂದು ಸುಮಾರು 12:50 ಗಂಟೆಗೆ ಫಿರ್ಯಾದಿ ಗಣಪ ಕೃಷ್ಣ (56) ಮರವಂತೆ ಗ್ರಾಮ, ಬೈಂದೂರು ತಾಲೂಕು ಇವರು ಮರವಂತೆ ಗ್ರಾಮದ ವರಾಹಸ್ವಾಮಿ ದೇವಸ್ಥಾನದ ಎದುರಿನ ರಾ.ಹೆ 66 ರ ಪಶ್ಚಿಮ ಬದಿಯ ಬಸ್ ನಿಲ್ದಾಣದ ಬಳಿಯ ಕ್ಯಾಂಟಿನ್ ಹೊರಗಡೆ ನಿಂತಿದ್ದಾಗ ಮರವಂತೆ ಸೀಲ್ಯಾಂಡ್ ಬಾರ್ ಕಡೆಯಿಂದ ಅಂದರೆ ರಾ.ಹೆ. 66 ರ ಪಶ್ಚಿಮ ಬದಿಯ ರಸ್ತೆಯಿಂದ KA 20 EJ 5601 ಮೋಟಾರು ಸೈಕಲ್ ಸವಾರ ಲಕ್ಷ್ಮಣನು ತನ್ನ ಮೋಟಾರು ಸೈಕಲನ್ನು ವಿರುದ್ದ ದಿಕ್ಕಿನಿಂದ ಸವಾರಿ ಮಾಡಿಕೊಂಡು ಬಂದು ರಾ.ಹೆ 66 ರ ಪೂರ್ವ ಬದಿಯ ವರಹಸ್ವಾಮಿ ದೇವಸ್ಥಾನದ ಕಡೆಗೆ ಯಾವುದೇ ಸೂಚನೆ ನೀಡದೇ ನಿರ್ಲಕ್ಷ ತನದಿಂದ ಸವಾರಿ ಮಾಡಿಕೊಂಡು ರಾ ಹೆ 66 ರಲ್ಲಿ ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಮೊಹಮ್ಮದ್ ಸಂಶೀರ್ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ KA 19 AD 7742 ನಂಬ್ರದ TATA YODHA ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರ ಲಕ್ಷ್ಮಣನು ಮೋಟಾರ್ ಸೈಕಲ್ ಸಮೇತ ಪಿಕಪ್ ವಾಹನದ ಕೆಳಗಡೆ ಬಿದ್ದಿದ್ದು, ತೀವೃವಾಗಿ ಅಸ್ವಸ್ಥಗೊಂಡ ಲಕ್ಷ್ಮಣ ರವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ 01:30 ಗಂಟೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈಧ್ಯರು ಲಕ್ಷ್ಮಣರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಅಪಘಾತಕ್ಕೆ KA 20 EJ 5601ಮೋಟಾರು ಸೈಕಲ್ ಸವಾರ ಲಕ್ಷ್ಮಣರವರ ನಿರ್ಲಕ್ಷತನದ ಚಾಲನೆಯೆ ಕಾರಣವಾಗಿರುತ್ತದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 75/2025 ಕಲಂ: 281, 106 BNS ನಂತೆ ಪ್ರಕರಣ ದಾಖಲಾಗಿರುತ್ತದೆ.