Home Crime ಕಾಸರಗೋಡು : ಪ್ರೀತಿಯ ನಾಟಕವಾಡಿ 10 ಪವನ್‌ ಚಿನ್ನ ವಂಚನೆ : ಯುವ ಕಾಂಗ್ರೆಸ್‌ ನೇತಾರ...

ಕಾಸರಗೋಡು : ಪ್ರೀತಿಯ ನಾಟಕವಾಡಿ 10 ಪವನ್‌ ಚಿನ್ನ ವಂಚನೆ : ಯುವ ಕಾಂಗ್ರೆಸ್‌ ನೇತಾರ ಸೆರೆ….!!

ಕಾಸರಗೋಡು: ಪ್ರೀತಿಯ ನಾಟಕವಾಡಿ ಮನೆಯೊಡತಿಯಿಂದ 10 ಪವನ್‌ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತ ನೀಲೇಶ್ವರ ಮಾರ್ಕೆಟ್‌ ಬಳಿಯ ಕಾಟಿಕುಳದ ಶನೀರ್‌ ಎಂಬಾತನನ್ನು ಕಲ್ಲಿಕೋಟೆ ವೈದ್ಯಕೀಯ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೆ. ಬೈಜು ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.

ಕಲ್ಲಿಕೋಟೆಯ ಮನೆ ಮಾಲಕಿಯೋರ್ವರನ್ನು ನಕಲಿ ಫೇಸ್‌ಬುಕ್‌ ಖಾತೆ ಮೂಲಕ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿ ಅಡವಿರಿಸಲೆಂದು 10 ಪವನ್‌ ಚಿನ್ನಾಭರಣ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.