Home Latest “ಇನ್ಕ್ಲೂಸಿವ್ ಎಜುಕೇಶನ್ -ಸೇಫ್ ಮೈಂಡ್ಸ್” ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭ

“ಇನ್ಕ್ಲೂಸಿವ್ ಎಜುಕೇಶನ್ -ಸೇಫ್ ಮೈಂಡ್ಸ್” ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭ

ಉಡುಪಿ : ದಿನಾಂಕ 19-06-2026 ರಂದು ಬೆಳಿಗ್ಗೆ 9:30 ಗಂಟೆಗೆ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್, ಡಾ. ಎ. ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ, ಒನ್ ಗುಡ್ ಸ್ಟೆಪ್,ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ–ಕರಾವಳಿ, ಸಹಾಸ್ ಪಿಡಿಯಾಟ್ರಿಕ್ ಇಂಟರ್ವೆಂಷನ್ ಸೆಂಟರ್

ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್

ಹಿರಿಯಡ್ಕ ಇವರ ಸಂಯುಕ್ತ ಆಶ್ರಯದಲ್ಲಿ “ಇನ್ಕ್ಲೂಸಿವ್ ಎಜುಕೇಶನ್ -ಸೇಫ್ ಮೈಂಡ್ಸ್” ಎಂಬ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು IMA ಭವನ, ಬ್ರಹ್ಮಗಿರಿ, ಉಡುಪಿ ಇಲ್ಲಿ ಆಯೋಜಿಸಲಾಯಿತು. ಪ್ರಾಥನೆಯನ್ನು ಶ್ರೀಮತಿ ಪೂರ್ಣಿಮಾ ಎಸ್ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಅಶೋಕ್ ಕುಮಾರ್, ಮಕ್ಕಳ ತಜ್ಞರು ಹಾಗೂ ಅಧ್ಯಕ್ಷರು, IMA ಉಡುಪಿ–ಕರಾವಳಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಅಶೋಕ ಕಾಮತ್, ಪ್ರಾಂಶುಪಾಲರು ಹಾಗೂ ಉಪ ನಿರ್ದೇಶಕರು (ಶಾಲಾ ಶಿಕ್ಷಣ ಅಭಿವೃದ್ಧಿ), DIET ಉಡುಪಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಿ. ವಿ. ಭಂಡಾರಿ, ನಿರ್ದೇಶಕರು, ಡಾ. ಎ. ವಿ. ಬಲಿಗಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಉಡುಪಿ ವಹಿಸಿದ್ದರು.

ಕಾರ್ಯಾಗಾರದ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಡಾ. ನೀತಾ ಮೆಹ್ತಾ, ನಿರ್ದೇಶಕರು – ಸಹಾಸ್,ಮಕ್ಕಳ ಫಿಸಿಯೋಥೆರಪಿಸ್ಟ್, ಆಟಿಸಂ ಇಂಟರ್ವೆನ್ಷನಿಸ್ಟ್ ಹಾಗೂ ರೆಮಿಡಿಯಲ್ ಎಜುಕೇಟರ್ ಭಾಗವಹಿಸಿ, ವಿಶೇಷ ಅಗತ್ಯಗಳಿರುವ ಮಕ್ಕಳ ಶಿಕ್ಷಣ, ಒಳಗೊಳ್ಳುವ ಶಾಲಾ ವ್ಯವಸ್ಥೆ ಹಾಗೂ ಮಕ್ಕಳ ಮಾನಸಿಕ ಸುರಕ್ಷತೆ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಭಾಸ್ಕರ್ ಸಿ. ಎನ್. (ಟ್ರಸ್ಟೀ, ಒನ್ ಗುಡ್ ಸ್ಟೆಪ್ ), ಶ್ರೀಮತಿ ನಿರಾಲಿ ವೋರಾ (ನಿರ್ದೇಶಕರು, ,ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಶ್ರೀಮತಿ ಅಮಿತಾ ಪೈ (ಸ್ಥಾಪಕಿ, ಒನ್ ಗುಡ್ ಸ್ಟೆಪ್ ), ಶ್ರೀಮತಿ ದೀಪಾ ಭಂಡಾರಿ (ನಿವೃತ್ತ ಉಪ ಪ್ರಾಂಶುಪಾಲರು) ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.ಕೊನೆಗೆ ಶ್ರೀಮತಿ ದೀಪಶ್ರೀಯವರು ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮವು ಮಕ್ಕಳಿಗೆ ಸಮಾನ ಅವಕಾಶ, ವಿಶೇಷ ಮಕ್ಕಳ ಒಳಗೊಳ್ಳುವಿಕೆ ಹಾಗೂ ಸುರಕ್ಷಿತ ಕಲಿಕಾ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ