Home Karavali Karnataka ಕಾರ್ಯನಿರತ ಪತ್ರಕರ್ತರ ಧ್ವನಿ ಭಟ್ಕಳ ತಾಲೂಕು ಘಟಕದಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ,ಪತ್ರಕರ್ತರ ಸಮಾಗಮ ಹಾಗೂ...

ಕಾರ್ಯನಿರತ ಪತ್ರಕರ್ತರ ಧ್ವನಿ ಭಟ್ಕಳ ತಾಲೂಕು ಘಟಕದಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ,ಪತ್ರಕರ್ತರ ಸಮಾಗಮ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ…!!

ಭಟ್ಕಳ : ಜನವರಿ 28, 2026 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಶ್ರೀ ನಾಗಯಕ್ಷೆ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಭಟ್ಕಳ ತಾಲೂಕು ಘಟಕ ವತಿಯಿಂದ ಪತ್ರಕರ್ತರ ರಾಜ್ಯ ಮಟ್ಟದ ವಿಚಾರ ಸಂಕಿರಣ,ಪತ್ರಕರ್ತರ ಸಮಾಗಮ ಹಾಗೂ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಅರ್ಥಪೂರ್ಣ ಸಮಾರಂಭದ ಉಧ್ಘಾಟನೆಯನ್ನು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಗಳು ಆದ ಮಾನ್ಯ ಸಂತೋಷ ಹೆಗಡೆ ಯವರು ನೆರವೇರಿಸುವರು,ಮುಖ್ಯ ಅತಿಥಿಗಳಾಗಿ ಟಿ.ಎಸ್.ಆರ್ ಪ್ರಶಸ್ತಿ ವಿಜೇತರು ನಾಡಿನ ಹಿರಿಯ ಪತ್ರಕರ್ತರಾದ ಮಾನ್ಯ ಗಂಗಾಧರ ಮೊದಲಿಯಾರ್,ಗ್ಯಾರೆಂಟಿ ನ್ಯೂಸ್ ಚಾನಲ್ ನ ಮುಖ್ಯಸ್ಥರು, ಸಂಪಾದಕರಾದ ಶ್ರೀಮತಿ ರಾಧ ಹಿರೇಗೌಡರ್,ಕನ್ನಡ ಪ್ರಭ ದಿನ ಪತ್ರಿಕೆಯ ಹಿರಿಯ ಪತ್ರಕರ್ತರಾದ ಜಗಳೂರು ಲಕ್ಷ್ಮಣರಾವ್, ಕಾನಿಪ ಧ್ವನಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಮಂಕಾಳ ಎಸ್. ವೈದ್ಯ, ಶ್ರೀ ನಾಗಯಕ್ಷೆ ದೇವಸ್ಥಾನದ ಧರ್ಮದಶ್ರಿ ರಾಮದಾಸ್ ಪ್ರಭು, ಮಾಜಿ ಸಚಿವರು, ಶಾಸಕರು ,ಹಿರಿಯ ಅಧಿಕಾರಿಗಳು,ಸಾಹಿತಿಗಳು,ಹಲವಾರು ಸಂಘಟನೆಯ ಮುಖಂಡರುಗಳು ಹಾಗೂ ಇನ್ನೀತರ ಪ್ರಮುಖರು ಭಾವಹಿಸಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಮಗೆಲ್ಲಾ ಹೃದಯ ಪೂರ್ವಕ ಸ್ವಾಗತ ಕೋರುತೇವೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಶಂಕರ್ ನಾಯ್ಕ ತಿಳಿಸಿದ್ದಾರೆ.ಈ
ಸಂದರ್ಭದಲ್ಲಿ ರಾಜ್ಯದ ಹಿರಿಯ ಪತ್ರಕರ್ತ ರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರಾಜ್ಯ ಮಟ್ಟದ ಕಾರ್ಯಕ್ರಮದ ಪೂರ್ವಭಾವಿಯಾಗಿ ಈಗಾಗಲೇ ಕಾರ್ಯಕ್ರಮ ದ ಉದ್ಘಾಟಕರಾದ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಾಧೀಶರು, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಗಳು ಮಾನ್ಯ ಸಂತೋಷ ಹೆಗಡೆ ಯವರು ಬೆಂಗಳೂರಿನ ಅವರ ಮನೆಯಲ್ಲಿ ಕಾನಿಪ ಭಟ್ಕಳ ತಾಲೂಕ ಘಟಕದ ಪದಾಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದರು.ಸಂತೋಷ್ ಹೆಗಡೆಯವರು ಭಟ್ಕಳ ದಲ್ಲಿ ನಡೆಯುವ ರಾಜ್ಯಮಟ್ಟದ ಈ ಕಾರ್ಯಕ್ರಮಕ್ಕೆ ತಾವು ಉದ್ಘಾಟಕರಾಗಿ ಭಾಗವಹಿಸಲು ಅಧಿಕೃತ ಒಪ್ಪಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ,ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್.ನಾಯ್ಕ, ಭಟ್ಕಳ ತಾಲೂಕ ಅಧ್ಯಕ್ಷ ಶಂಕರ ನಾಯ್ಕ, ಉಪಾಧ್ಯಕ್ಷ ಉಲ್ಲಾಸ ಶಾನಭಾಗ್ ಮತ್ತು ಬೆಂಗಳೂರು ನಗರ ಜಿಲ್ಲಾ ಸಮಿತಿ ಸದಸ್ಯ ರಮೇಶ್ .ಶೆಟ್ಟಿ ಉಪಸ್ಥಿತರಿದ್ದರು.