Home Crime ಉಡುಪಿ : ಯುವಕನೋರ್ವ ಆತ್ಮಹತ್ಯೆ…!!

ಉಡುಪಿ : ಯುವಕನೋರ್ವ ಆತ್ಮಹತ್ಯೆ…!!

ಉಡುಪಿ: ನಗರದ ಸಮೀಪ ಯುವಕನೊಬ್ಬ ಮನೆಯಲ್ಲಿ ‌ವಿನಾಕಾರಣ ಗಲಾಟೆ ಮಾಡಿ, ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೊಳಾಗದ ಯುವಕ ದೀಕ್ಷಿತ್ ಎಂದು ತಿಳಿದು ಬಂದಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಸುರೇಶ (55), ನಿಟ್ಟೂರು ಪುತ್ತೂರು ಗ್ರಾಮ ಇವರ ಮಗ ದೀಕ್ಷಿತ್ ಆರ್ (26) ಇವರು 10 ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡು ಬಳಿಕ ಪೈಟಿಂಗ್ ಕೆಲಸವನ್ನು ನಿಟ್ಟೂರು ಪರಿಸರದಲ್ಲಿ ಮಾಡಿಕೊಂಡಿದ್ದನು . ದೀಕ್ಷಿತ್ 2-3 ವರ್ಷ ಗಳಿಂದ ಶರಾಬು ಕುಡಿಯುವ ಹವ್ಯಾಸ ಹೊಂಡಿದ್ದು 3-4 ತಿಂಗಳಿಂದ ಕುಡಿತವನ್ನು ಬಿಟ್ಟಿರುತ್ತಾನೆ. ದಿನಾಂಕ 14/07/2025 ರಂದು ರಾತ್ರಿ 09:00 ಗಂಟೆಗೆ ದೀಕ್ಷಿತ್ ಸಾರಾಯಿ ಕುಡಿದು ಬಂದು ವಿನಾಕಾರಣ ಮನೆಯಲ್ಲಿ ಗಲಾಟೆ ಮಾಡಿರುತ್ತಾನೆ . ಬೆಳಗಿನ ಜಾವ ದಿನಾಂಕ 15/07/2025 ರ ಬೆಳಿಗ್ಗೆ 1:00 ಗಂಟೆಯವರೆಗೆ ಮನೆಯಲ್ಲಿಯೆ ಇದ್ದು ನಂತರ ಮನೆಯಿಂದ ಹೊರಗಡೆ ಹೋಗಿರುತ್ತಾನೆ. ಬೆಳಿಗ್ಗೆ ಎದ್ದು ದೀಕ್ಷಿತ್ ನನ್ನು ಹುಡುಕಾಡುತ್ತಿರುವಾಗ ಬೆಳಿಗ್ಗೆ 10:00 ಗಂಟೆಗೆ ಮನೆಯ ಪಕ್ಕದಲ್ಲಿರುವ ಅರವಿಂದ ಪುತ್ತೂರು ರವರ ನಿರ್ಮಾಣ ಹಂತದಲ್ಲಿ ನಿಂತಿರುವ ಮನೆಯ ಮೇಲ್ಭಾಗದ ಟೆರೇಸಿಗೆ ಹೋಗುವ ಮೆಟ್ಟಿಲಿನ ಕಬ್ಬಿಣ್ಣದ ರಾಡಿಗೆ ಬೆಡ್ ಶೀಟನ್ನು ಕಟ್ಟಿ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 64/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.