ಉಡುಪಿ: ಎಕೆಎಮ್‌ಎಸ್ ಬಸ್ ಮಾಲಕ ಸೈಫುದ್ದೀನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯೋರ್ವಳನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಖಾಸಗಿ ಬಸ್‌ನ ಮಾಲಕ, ರೌಡಿಶೀಟರ್ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ಮೊದಲ ಆರೋಪಿ ಫೈಜಲ್ ಖಾನ್ ಪತ್ನಿ ಮಿಷನ್ ಕಾಂಪೌಂಡ್ ನಿವಾಸಿ ರಿಧಾ ಶಭನಾ(27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಕಳೆದ ತಿಂಗಳು ರೌಡಿಶೀಟರ್ ಸೈಫ್ ನನ್ನು ವರು ಸಹಚಾರರು ಹತ್ಯೆ ಮಾಡಿದ್ದರು. ಇದೀಗ ಹತ್ಯೆಯಲ್ಲಿ ಮಹಿಳೆ ಕೂಡ ಭಾಗಿಯಾಗಿದ್ದು ಆಕೆಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
