Home Karavali Karnataka ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ವತಿಯಿಂದ ಉದ್ಯಮ ಮೇಳ ಮತ್ತು ಆಹಾರ ಮೇಳ...

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ವತಿಯಿಂದ ಉದ್ಯಮ ಮೇಳ ಮತ್ತು ಆಹಾರ ಮೇಳ ಸಂಪನ್ನ…!!

ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಪ್ರಥಮ ಬಾರಿಗೆ ಯುವ ವಿಪ್ರ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಉಚಿತವಾಗಿ ಉದ್ಯಮ ಮಳಿಗೆಗಳ ಮೇಳವನ್ನು ಗುಂಡಿಬೈಲಿನ ಬ್ರಾಹ್ಮಿ ಸಭಾಭವನದ ಆವರಣದಲ್ಲಿ ಆಯೋಜಿಸಲಾಗಿತ್ತು.

ಜನೋಪಯೋಗಿ ಸುಮಾರು 20 ಆಕರ್ಷಕ ಮಳಿಗೆಗಳಿಗೆ ಅವಕಾಶವನ್ನು ನೀಡಲಾಯಿತು. ಈ ಉದ್ಯಮ ಮಳಿಗೆಗಳನ್ನು ಸ್ಥಳೀಯ ಕೌನ್ಸಿಲರ್ ಹಾಗೂ ಪ್ರಸ್ತುತ ನಗರಸಭಾ ಅಧ್ಯಕ್ಷರಾಗಿರುವ ಶ್ರೀ ಪ್ರಭಾಕರ ಪೂಜಾರಿಯವರು ಉದ್ಘಾಟಿಸಿದರು. ಅವರು ಮಾತನಾಡುತ್ತಾ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಇಂತಹ ಹಲವಾರು ಜನಹಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಜನ ಮೆಚ್ಚುಗೆ ಗಳಿಸಿದೆ. ಇಂತಹ ಸಕ್ರಿಯ ಸಂಸ್ಥೆ ನಮ್ಮ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಲಾದ ಆಹಾರ ಮೇಳವನ್ನು ಪಾಕಶಾಲಾ ಹೋಟೆಲ್ ಉದ್ಯಮದ ಆಡಳಿತ ನಿರ್ದೇಶಕಿ ಶ್ರೀಮತಿ ವಿನೋದ ವಿ, ಅಡಿಗ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಶ್ರೀಹರಿನಾರಾಯಣ ಆಸ್ರಣ್ಣ, ಪರಿಷತ್ತಿನ ಮಾಜಿ ಅಧ್ಯಕ್ಷ ಎಂ. ಎಸ್. ವಿಷ್ಣು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ. ಎನ್. ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಮಾಜಿ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್, ಸಂಚಾಲಕ ರವಿರಾಜ್ ರಾವ್, ಕೆ. ರಘುಪತಿ ರಾವ್, ಮುರಳಿ ಅಡಿಗ, ಪ್ರವೀಣ ಉಪಾಧ್ಯಾಯ, ಸುಮನ ಆಚಾರ್ಯ, ಜ್ಯೋತಿ ಲಕ್ಷ್ಮಿ, ದೀಪಾ ರವಿರಾಜ್ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ ವಂದನಾರ್ಪಣೆಗೈದರು.