Home Karavali Karnataka ಉಡುಪಿ : ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ…!!

ಉಡುಪಿ : ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತುರ್ತು ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆ ಬಗ್ಗೆ ಪ್ರಾತ್ಯಕ್ಷಿಕೆ…!!

ಉಡುಪಿ : ತುರ್ತು ಸಂದರ್ಭದಲ್ಲಿ ಗಾಯಗೊಂಡವರು ಮತ್ತು ಅಸ್ವಸ್ಥಗೊಂಡವರ ರಕ್ಷಣಾ ಕಾರ್ಯದ ಬಗ್ಗೆ ರೈಲ್ವೆ ಪೊಲೀಸರು ಪ್ರಾತ್ಯಕ್ಷಿಕೆ ಆಯೋಜನೆ ಮಾಡಿದ್ದರು.

ಇಂದ್ರಾಳಿ ರೈಲ್ವೆ ನಿಲ್ದಾಣ ಸಮೀಪ ಈ ಪ್ರಾತ್ಯಕ್ಷಿಕೆ ನಡೆಯಿತು. ರೈಲ್ವೆ ಪೊಲೀಸರ ಜೊತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಭಾಗಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಮುಖ್ಯವಾಗಿ ಈ ಹಿಂದೆ ಹಲವು ಜನ ಗಾಯಾಳುಗಳು ಮತ್ತು ಅಸ್ವಸ್ಥಗೊಂಡವರನ್ನು ತಕ್ಷಣ ಆಸ್ಪತ್ರೆಗಳಿಗೆ ಸಾಗಿಸಿ ಜೀವ ಉಳಿಸಿದ ಅನುಭವ ನಿತ್ಯಾನಂದ ಅವರಿಗೆ ಇತ್ತು. ಈ ಅನುಭವದ ಆಧಾರಾದ ಮೇಲೆ ಪ್ರಾತ್ಯಕ್ಷಿಕೆ ನಡೆಸಿದ ಒಳಕಾಡು ಅವರು ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಉತ್ತರ ಭಾರತ ಸಹಿತ ಹಲವು ಭಾಗದ ಜನರು ಇಂದ್ರಾಳಿ ರೈಲ್ವೆ ನಿಲ್ದಾಣವನ್ನು ಅವಲಂಬಿಸಿದ್ದಾರೆ. ನಿಲ್ದಾಣ ಸಮೀಪ ಅವರು ಗಾಯಗೊಂಡಾಗ ಅಥವಾ ರೈಲಿನಲ್ಲಿ ಪ್ರಯಾಣಿಕರು ಅಸ್ವಸ್ಥಗೊಂಡಾಗ ತಕ್ಷಣ ಅವರಿಗೆ ವೈದ್ಯಕೀಯ ನೆರವು ಕಲ್ಪಿಸಿ ಜೀವ ಉಳಿಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.